ಬಳ್ಪ ಪೇಟೆ ಸಮೀಪ ಕಳ್ಳರು ಮನೆಯೊಂದರ ಕಿಟಕಿ ಬಡಿದು ಮನೆಯವರು ಎಚ್ಚರ ಗೊಂಡಾಗ ಪರಾರಿಯಾದ ಘಟನೆ ಡಿ.17 ರಂದು ವರದಿಯಾಗಿದೆ.
ಡಿ.17 ರಂದು ಮುಂಜಾನೆ 3 ಗಂಟೆ ವೇಳೆಗೆ ಬಳ್ಪದ ಧನಂಜಯ ಎಂಬವರ ಮನೆಯ ಎರಡು ಕಿಟಕಿಗಳ ಬಡಿದಿದ್ದು ಮನೆಯವರು ಎಚ್ಚರ ಗೊಂಡಾಗ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಳಿಕ ಅವರು ಸಮೀಪದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೇ ಬಳ್ಪದ ಅಕ್ಕೇಣಿಯಲ್ಲಿ ಭಾರೀ ಚಿನ್ನ, ನಗದು ಕಳ್ಳತವಾಗಿತ್ತು. ತಿಂಗಳ ಹಿಂದೆ ಪಂಜದ ರಬ್ಬರ್ ಖರೀದಿ ಕೇಂದ್ರದಲ್ಲಿ ಹಾಡ ಹಗಲೇ ಕಳ್ಳತನಕ್ಕೆ ಯತ್ನ ನಡೆದಿತ್ತು. ಆದರೆ ಕಳ್ಳರು ಇನ್ನೂ ಪತ್ತೆಯಾಗಿಲ್ಲ. ಇದೀಗ ಮತ್ತೆ ಕಳ್ಳತನಕ್ಕೆ ಯತ್ನ ನಡೆದಿದ್ದು ಜನರಲ್ಲಿ ಭಯ ಹುಟ್ಟಿಸಿದೆ.