ಪೈಲಾರಿನಿಂದ ಕುಕ್ಕುಜಡ್ಕ ಪೇಟೆಯ ತನಕ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಚತೆ ಮತ್ತು ಶ್ರಮದಾನ

0

ಪೈಲಾರಿನ ಮಿತ್ರವೃಂದ, ಫ್ರೆಂಡ್ಸ್ ಕ್ಲಬ್,ಶೌರ್ಯ ಯುವತಿ ಮಂಡಲ ಇವುಗಳ ಜಂಟಿ ಆಶ್ರಯದಲ್ಲಿ ಪೈಲಾರಿನ ಪರಿಸರದಲ್ಲಿ “ನಮ್ಮ ಊರು ನಮ್ಮ ರಸ್ತೆ”ಎಂಬ ಧ್ಯೇಯ ವಾಕ್ಯದೊಂದಿಗೆ ಡಿ.15 ರಂದು ಸ್ವಚ್ಚತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪೈಲಾರಿನಿಂದ ಕುಕ್ಕುಜಡ್ಕ ತನಕ ರಸ್ತೆಯ ಬದಿಯ ಗಿಡ ಗಂಟಿ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು. ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಗೆ ಕಲ್ಲು ತುಂಬಿಸುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಶ್ರಮದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಸಹಕರಿಸಿದರು.