ಐವರ್ನಾಡು ಗ್ರಾಮದ ಮುಚ್ಚಿನಡ್ಕ ಸ್ವಾಮಿ ಕೊರಗಜ್ಹ ಸೇವಾ ಸಮಿತಿಯಿಂದ 2 ನೇ ವರ್ಷದ ಗಣಹೋಮ ಮತ್ತು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಡಿ.28 ರಂದು ನಡೆಯಲಿರುವುದು.
ಬೆಳಿಗ್ಗೆ ಗಂಟೆ 7.30 ಕ್ಕೆ ಗಣಪತಿ ಹೋಮ,ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ಗಂಟೆ 6.30 ಕ್ಕೆ ಕೊರಗಜ್ಜ ದೈವದ ಭಂಡಾರ ತೆಗೆಯುವುದು.ನಂತರ ಭಜನಾ ಕಾರ್ಯಕ್ರಮ ನಡೆಯಲಿರುವುದು. ರಾತ್ರಿ ಗಂಟೆ 8.00 ರಿಂದ ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ 9.30 ಕ್ಕೆ ಶ್ರೀ ಕೊರಗಜ್ಜ ನೇಮೋತ್ಸವ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವ ದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಡಳಿತ ಮೊಕ್ತೇಸರರಾದ ಮಣಿ ಎಂ.ರವರು ತಿಳಿಸಿದ್ದಾರೆ.