ಸುಳ್ಯ : ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಎರಡನೇ ದಿನಕ್ಕೆ ಮುಂದುವರಿಕೆ

0

ಪ್ರಯೋಜನ ಪಡೆದ ನೂರಾರು ವಿದ್ಯಾರ್ಥಿಗಳು,ಹಾಗೂ ಸಾರ್ವಜನಿಕರು

ಲಯನ್ಸ್ ಇಂಟರ್‌ನ್ಯಾಷನಲ್,ಲಯನ್ಸ್ ಕ್ಲಬ್ ಸುಳ್ಯ ಹಾಗೂ
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಆಶ್ರಯದಲ್ಲಿ ಡಿಸೆಂಬರ್ 16 ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆದ ಬೃಹತ್
ಆಧಾ‌ರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಡಿ 17 ಕ್ಕೆ ಮುಂದು ವರಿದು ಯಶಸ್ವಿಯಾಗಿ ನಡೆಯಿತು.

ಇದರೊಂದಿಗೆ ಅಪಘಾತ, ಆರೋಗ್ಯ ವಿಮಾ ಯೋಜನಾ ಶಿಬಿರವು ನಡೆಯಿತು.

ಸುಳ್ಯದಲ್ಲಿ ಆಧಾರ್ ಕೇಂದ್ರದ ಸಮಸ್ಯೆ ಇರುವ ಹಿನ್ನಲೆಯಲ್ಲಿ ಆಧಾರ್ ನೋಂದಣಿಗೆ ಕಾಯುತಿದ್ದ ಫಲಾನುಭವಿಗಳಿಗೆ ಈ ಅಭಿಯಾನ ಹೆಚ್ಚು ಪ್ರಯೋಜನವನ್ನು ನೀಡಿತು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಕೇಂದ್ರದಲ್ಲಿ ಕಂಡು ಬರುತಿದ್ದರು.

ಈ ಸಂಧರ್ಭದಲ್ಲಿ ಸುಳ್ಯ ಲಯನ್ MJF ಅಧ್ಯಕ್ಷರಾದ ರಾಮಕೃಷ್ಣ ರೈ, ಸುಳ್ಯ ಪ್ರಧಾನ ಅಂಚೆ ಕಚೇರಿ ಅಂಚೆ ಪಾಲಕ ಮೋಹನ ಎಂ ಕೆ, ಅಂಚೆ ನಿರೀಕ್ಷಕ ವಿನೋದ್ ಕುಮಾರ್, ಸಂಯೋಜಕರಾದ ಲಯನ್ ವೀರಪ್ಪ ಗೌಡ ಕೆ,ಕಾರ್ಯದರ್ಶಿ ಲಯನ್ ರಾಮಚಂದ್ರ ಪಳ್ಳತ್ತಡ್ಕ, ಕೋಶಾಧಿಕಾರಿ ಲಯನ್ ರಮೇಶ್ ಶೆಟ್ಟಿ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಅಂಚೆ ಇಲಾಖೆಯ ಸಿಬ್ಬಂದಿಗಳಾದ ಅಕ್ಷಯ್ ಕುಮಾರ್ ದೊಡ್ಡ ತೋಟ, ದೀಕ್ಷಿತ್, ಮೋಹಿತ್ ಸುಬ್ರಮಣ್ಯ ಸಹಕರಿಸಿದರು.