ವಿಶೇಷಚೇತನ ವೇಣುಪ್ರಸಾದ್ ಅಡ್ಯಡ್ಕರವರಿಗೆ ಉಚಿತ ಸಾಧನ ಸಲಕರಣೆ ವಿತರಣೆ

0

ತೊಡಿಕಾನ ಗ್ರಾಮದ ಅಡ್ಯಡ್ಕದ ವಿಶೇಷಚೇತನ ಹುಡುಗ ವೇಣುಪ್ರಸಾದ್ ರವರಿಗೆ ಸುಲಭವಾಗಿ ನಡೆಯಲು ಸಾಧನ ಸಲಕರಣೆಯನ್ನು ಪುತ್ತೂರಿನ ಎಂವಿ ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಮುಖ್ಯಸ್ಥ ಸುಬ್ರಮಣಿ ಕಲ್ಲುಗುಂಡಿ
ಉಚಿತವಾಗಿ ವಿತರಿಸಿದ್ದಾರೆ.

ವೇಣುಪ್ರಸಾದ್ ರಿಗೆ ಆರಂಭದಿಂದಲೂ ವಿವಿಧ ರೀತಿಯ ಸಹಕಾರ ನೀಡುತ್ತಿರುವ ಇವರು, ಈ ಹಿಂದೆಯೂ ಇವರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ದೊರಕಲು ಸಹಕರಿಸಿದ್ದರು.

3 ವರ್ಷಗಳ ಹಿಂದೆಯೂ ಸುಬ್ರಮಣಿಯವರು ವೇಣುಪ್ರಸಾದ ರಿಗೆ ಇಂತಹ ಸಾಧನ ಸಲಕರಣೆ ನೀಡಿದ್ದರು. ನಿರಂತರವಾಗಿ ಇದನ್ನು ಉಪಯೋಗಿಸುತ್ತಿದ್ದರಿಂದ ಸಲಕರಣೆ ತುದಿ ಭಾಗ ತುಂಡಾಗಿತ್ತು.

ಸುಬ್ರಮಣಿಯವರು ಈಗಾಗಲೇ ವಿಶೇಷಚೇತನ ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ಅಗತ್ಯ ಸೇವೆ ಮಾಡುತ್ತಿದ್ದಾರೆ.