ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡ ಬಂದ ಪರಿಹಾರಗಳ ಹಿನ್ನೆಲೆ
ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ತಾಂಬೂಲ ಪ್ರಶ್ನಾ ಚಿಂತನೆ ಯಲ್ಲಿ ಕಂಡು ಬಂದ ಪರಿಹಾರದ ಹಿನ್ನಲೆಯಲ್ಲಿ ಡಿ.21 ಮತ್ತು 22 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಡಿ.21 ರಂದು ಬೆಳಿಗ್ಗೆ 8ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಶ್ರೀದೇವರಿಗೆ
ಶತರುದ್ರಾಭಿಷೇಕ, ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ. ಮಧ್ಯಾಹ್ನ 11.30ಕ್ಕೆ ಮುಷ್ಠಿಕಾಣಿಕೆ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ. ಸಂಜೆ 5.30ರಿಂದ ದುರ್ಗಾಪೂಜೆ, ಅಘೋರ ಹೊಮ, ಸುದರ್ಶನ ಹೋಮ, ಭಾದಾಕರ್ಷಣೆ, ಉಚ್ಛಾಟನೆ ನಡೆಯಲಿದೆ.
ಡಿ.22 ರಂದು ಬೆಳಿಗ್ಗೆ ಬಿಂಬ ಕಲಶ ಪೂಜೆ, ಬಿಂಬ ಶುದ್ಧಿ, ಕಲಶಾಭಿಷೇಕ, ನವಕ, ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ಡಿ.21 ರಂದು ಪೂರ್ವಾಹ್ನ ಶ್ರೀ ದೇವರಿಗೆ ಶತ ರುದ್ರಾಭಿಷೇಕ ಇರುವುದರಿಂದ ಅಭಿಷೇಕಕ್ಕೆ ಸುಮಾರು 150 ಎಳನೀರು ಬೇಕಾಗಿರುವುದರಿಂದ ಎಳನೀರು ತರುವವರು ಡಿ.20 ರಂದು ಮಧ್ಯಾಹ್ನ ದೊಳಗೆ ತರಬೇಕು. ಡಿ.21 ರಂದು ಸಂಜೆ ದುರ್ಗಾಪೂಜೆ ಇರುವುದರಿಂದ ಭಕ್ತರು ಕೇಪಳ ಹೂ ಹಾಗು ತುಳಸಿ ತರಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.