ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಉಜ್ರೋಳಿ ಬೆಳ್ಳಾರೆ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ 10 ನೇ ವರ್ಷದ ದೀಪೋತ್ಸವವು ಡಿ.28 ಮತ್ತು ಡಿ.29 ರಂದು ನಡೆಯಲಿದೆ.
ಡಿ.28 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಸ್ಥಳ ಶುದ್ಧೀಕರಣ ಮತ್ತು ಗಣಹೋಮ ನಡೆಯಲಿದೆ.
ಸಂಜೆ ಗಂಟೆ 6.00 ಕ್ಕೆ ಗೌರಿಹೊಳೆಯಿಂದ ಪಾಲ್ ಕೊಂಬು ಮೆರವಣಿಗೆ ನಡೆಯಲಿದೆ.
ರಾತ್ರಿ ಗಂಟೆ 8.00 ಕ್ಕೆ ಅಗ್ನಿಸ್ಪರ್ಶ,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 9.00 ಕ್ಕೆ ಅನ್ನಸಂತರ್ಪಣೆ ,10.30 ಕ್ಕೆ ಅಪ್ಪಸೇವೆ,ರಾತ್ರಿ ಗಂಟೆ 11.00 ರಿಂದ ತುಳು ಯಕ್ಷಗಾನ ಬಯಲಾಟ ‘ಸರ್ಪಸಿರಿಮುಡಿ’ನಡೆಯಲಿದೆ.
ಡಿ.29 ರಂದು ಬೆಳಿಗ್ಗೆ ಗಂಟೆ 4.00 ಕ್ಕೆ ಕೆಂಡಸೇವೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ತಿಳಿಸಿದ್ದಾರೆ.