ಖತೀಬರಾದ ಮೂಸ ಸಖಾಫಿ ಪಳ್ಳಂಗೋಡ್
ವರ್ಷಂ ಪ್ರತೀ ಆಚರಣೆ ಮಾಡಿಕ್ಕೊಂಡು ಬರುವ ಕುಂಭಕ್ಕೋಡು ಬೀಬಿ ಮನವಾಟಿ ಮಹಾನ್ ರವರ ಉರೂಸ್ ಕಾರ್ಯಕ್ರಮಕ್ಕೆ ಡಿ 20 ರಂದು ಚಾಲನೆ ನೀಡಲಾಯಿತು.
ಸ್ಥಳೀಯ ಖತೀಬರಾದ ಮೂಸಾ ಸಖಾಫಿ ರವರ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆದು ಜಮಾಅತ್ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಸಅದಿ ರವರು ಧ್ವಜಾರೋಹಣ ನಡೆಸುವ ಮೂಲಕ
ವಲಿಯತುಲ್ಲಾಹಿ ಮಣವಾಟಿ ಬೀವಿ (ರ.ಅಂ.) ಕುಂಭಕ್ಕೋಡು ಮಖಾಂ ಉರೂಸ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉರೂಸ್ ಕಮಿಟಿ ಅಧ್ಯಕ್ಷ ಲತೀಫ್ ಸಅದಿ ಹಾಗೂ ಅಬ್ದುಲ್ ರಹ್ಮಾನ್ ಕೊಯಂಗಿ,ಅಬೂಬಕರ್ ಕೆ ಕೆ, ಹಾಜಿ ಅಬ್ದುರ್ರಹ್ಮಾನ್ ಎ ಕೆ, ಹಾರಿಸ್ ಕೆ ಇ, ಊರಿನ ಹಿರಿಯರು ಉಪಸ್ಥಿತರಿದ್ದರು.
ರಾತ್ರಿ 8 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ದುವಾಶೀರ್ವಚನ ನೀಡಲಿದ್ದಾರೆ ಹಾಗೂ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಡಿ. 21 ರಂದು ರಾತ್ರಿ ದುವಾಶೀರ್ವಚನ ಸಯ್ಯಿದ್ ಉಮರ್ ಜಿಫ್ರಿ ಅಲ್ ಹನೀಫಿ ಕುಂಭಕ್ಕೋಡು ತಂಙಳ್ ಮುಖ್ಯ ಪ್ರಭಾಷಣ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರ್ ನಡೆಸಲಿದ್ದಾರೆ.