ಪಾಲೆಪ್ಪಾಡಿಯಲ್ಲಿ ಪಕ್ಷದ ಕಾರ್ಯಕರ್ತರಿಂದ ವಿಜಯೋತ್ಸವ
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು ಡಿ.22 ರಂದು ನಡೆದಿದ್ದು ಎಸ್.ಎನ್.ಮನ್ಮಥರ ನೇತೃತ್ವದ ತಂಡ ಭರ್ಜರಿ ಜಯಭೇರಿ ಗಳಿಸಿತು.
ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪಾಲೆಪ್ಪಾಡಿ ವಾರ್ಡಿನಲ್ಲಿ ಶಾಂತಾರಾಮ ಕಣಿಲೆಗುಂಡಿ ನೇತೃತ್ವದಲ್ಲಿ ವಿಜಯೋತ್ಸವ ನಡೆಸಿದರು.
ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಪಕ್ಷದ ಪರ ಘೋಷಣೆ ಹಾಕಿ ಸಂಭ್ರಮಿಸಿದರು.