ಜಿಲ್ಲಾಧಿಕಾರಿಗಳ ಸೂಚನೆಯಂತೆ ಪೊಲೀಸ್ ಭದ್ರತೆಯಲ್ಲಿ ಸರ್ವೆ
ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ ಉಪಸ್ಥಿತಿ
ಆಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲಿ ಕೆಲವು ಕುಟುಂಬಗಳ ಮಧ್ಯೆ ಜಾಗದ ವಿವಾದವಿದ್ದು, ಇದೀಗ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಮಾರ್ಗದರ್ಶನದಲ್ಲಿ ಸ್ಥಳದ ಸರ್ವೆ ಕಾರ್ಯ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಸ್ಥಳದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯವರು ಸ್ಥಳದಲ್ಲಿದ್ದಾರೆ.
ನ್ಯಾಯವಾದಿಯಾಗಿರುವ ಬಡ್ಡಡ್ಕದ ವಸಂತಿ ಎಂಬವರು ತನ್ನ ಜಾಗವೆಂದು ಹೇಳಿ ಅಕ್ಕಪಕ್ಕದವರ ಜಾಗಕ್ಕೆ ಬೇಲಿ ಹಾಕಿದ್ದಾರೆಂದು ದೂರು ಹೋದ ಹಿನ್ನೆಲೆಯಲ್ಲಿ ವಿವಾದ ಎದ್ದಿತ್ತು. ಈ ಬಗ್ಗೆ ಅಕ್ಕಪಕ್ಕದವರಾದ ರಾಮಕೃಷ್ಣ ನಾಯ್ಕ್ ಮತ್ತು ಚಂದ್ರಾವತಿಯವರು ತಹಶೀಲ್ದಾರ್, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಇದೀಗ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರು ಆಲೆಟ್ಟಿ ಗ್ರಾಮದ ಸರ್ವೆ ನಂ. ೪೫೮/೧ರಲ್ಲಿ ೩.೫೨ ಎಕ್ರೆ ಮತ್ತು ೫೨೧/೧ ಎರಲ್ಲಿ ೦.೯೦ ಎಕ್ರೆ ವಸಂತಿಯವರ ಜಮೀನು, ೫೨೧/೧ ಸಿ೨ ರಲ್ಲಿ ೨.೫೨ ಮತ್ತು ೫೨೧/೨ರಲ್ಲಿ ೨.೦೧ ಎಕ್ರೆ ಚಂದ್ರಾವತಿಯವರ ಜಮೀನು, ೩೩೬/೧ಎ೧ರ ಪೈಕಿ ೨.೪೮ ಎಕ್ರೆ, ೧.೮೦ ಎಕ್ರೆ ರಾಮಕೃಷ್ಣರವರ ಜಮೀನು, ೫೭೨/೨ರಲ್ಲಿ ೦.೫೦ ಎಕ್ರೆ ವಿಶ್ವನಾಥ ರಾಮಕೃಷ್ಣರವರ ಜಮೀನು ಹಾಗೂ ಸರಕಾರಿ ಜಮೀನುಗಳನ್ನು ಪೊಲೀಸ್ ರಕ್ಷಣೆಯೊಂದಿಗೆ ಅಳತೆ ಕಾರ್ಯ ಜರಗಿಸಿ ವರದಿ ನೀಡುವಂತೆ ಸೂಚಿಸಿದ್ದರು. ಇಂದು ಸರ್ವೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಅಳತೆ ಕಾರ್ಯ ನಡೆಸುತ್ತಿದ್ದಾರೆ. ಹಾಗೂ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯವರು ಕೂಡಾ ಸ್ಥಳದಲ್ಲಿ ಉಪಸ್ಥಿತರಿದ್ದಾರೆಂದು ತಿಳಿದುಬಂದಿದೆ.