ಅರಂತೋಡು ಗ್ರಾಮದ ಕರಿಂಬಿ ಚಿನ್ನಪ್ಪ ಮಾಸ್ತರ್ರ ಧರ್ಮಪತ್ನಿ, ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.೨೭ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಶ್ರೀಮತಿ ಪುಷ್ಪಾವತಿಯವರು ಪೆರುವಾಜೆ, ಗಾಂಧಿನಗರ, ತೊಡಿಕಾನ, ಸೋಣಂಗೇರಿ ಶಾಲೆಗಳಲ್ಲಿ ಶಿಕ್ಷಕಿ, ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತಿ, ಪುತ್ರ ಅರಂತೋಡಿನ ನಯರಾ ಫ್ಯೂಯಲ್ಸ್ ಮಾಲಕ ಪ್ರಹ್ಲಾದ್ ಕೆ.ಸಿ., ಪುತ್ರಿ ಕರಿಕೆ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಲ್ಲವಿ ಪ್ರಶಾಂತ್ ತಂಟೆಪ್ಪಾಡಿ, ಸೊಸೆ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.