ಸುಳ್ಯ ಕಸಬಾದ ಬೀರಮಂಗಲ ನಿವಾಸಿ ನಿವೃತ್ತ ಫಾರೆಸ್ಟರ್ ಪದ್ಮಯ್ಯ ಗೌಡರವರು ಅಸೌಖ್ಯದಿಂದ ಇಂದು ಮುಂಜಾನೆತನ್ನಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ನಿವೃತ್ತ ಆರೋಗ್ಯ ಸಹಾಯಕಿ ಶ್ರೀಮತಿ ಸತ್ಯವತಿ, ಪುತ್ರ ಪ್ರೀತೇಶ್ ಪಿ, ಪುತ್ರಿ ಶ್ರೀಮತಿ ಪಲ್ಲವಿ ಪಿ, ಸೊಸೆ ಶ್ರೀಮತಿ ರೂಪ, ಅಳಿಯ ಗಣೇಶ್ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಬೀರಮಂಗಲ ಮನೆಯಲ್ಲಿ ಇರಿಸಲಾಗಿದ್ದು ಅಂತ್ಯ ಸಂಸ್ಕಾರವನ್ನು ಇಂದು ಮಧ್ಯಾಹ್ನ 2.00 ಗಂಟೆಗೆ ನೆರವೇರಿಸುವುದಾಗಿ ತಿಳಿದು ಬಂದಿದೆ.