ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ಇವರು ಇತ್ತೀಚೆಗೆ ಮಕ್ಕಳಿಗಾಗಿ ಆಯೋಜಿಸಿದ ಜಿಲ್ಲಾಮಟ್ಟದ ವನ್ಯ ಚಿತ್ತಾರ ಚಿತ್ರಕಲ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ನಿಶ್ಮಿತಾ ಬಳ್ಳಡ್ಕ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ.
ಡಿ. 21 ರಂದು ಪುತ್ತೂರಿನ ಅರಣ್ಯ ಇಲಾಖೆಯ ಸಮಾರಂಭದಲ್ಲಿ ಇಲಾಖಾಧಿಕಾರಿಗಳಿಂದ ಬಹುಮಾನ ಪಡೆದುಕೊಂಡರು.
ವಿಶೇಷ ಚೇತನ ಬಹುಮುಖ ಪ್ರತಿಭೆ ಆಗಿರುವ ನಿಶ್ಮಿತ ಬಳ್ಳಾಡ್ಕರ್ ಅವರು ಕಲಿಕೆ ಚಿತ್ರಕಲೆ ಸಂಗೀತ ಮುಂತಾದ ಕಲೋ ಕ್ಷೇತ್ರಗಳಲ್ಲಿ ಸನ್ಮಾನ ಹಾಗೂ ಬಹುಮಾನ ಗಳಿಸಿದ್ದಾರೆ. ಮುಳ್ಯ ಅಟ್ಲೂರು ಸ. ಉ.ಹಿ.ಪ್ರಾ. ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ನಿಶ್ಮಿತ ಅಜ್ಜಾವರ ಗ್ರಾಮದ ಬಳ್ಳಡ್ಕ ವಸಂತ ಮತ್ತು ಭಾರತಿ ದಂಪತಿಯ ಪುತ್ರಿ.