ಆರಂತೋಡು ಗ್ರಾಮದ ಪಾರೆಮಜಲು ಎಂಬಲ್ಲಿ ವಾಸವಿರುವ ಕೃಷ್ಣಯ್ಯ ಆಚಾರಿ (೯೨ವರ್ಷ ಅವರು ವಯೋ ಸಹಜರಾಗಿ ಇಂದು ಬೆಳಿಗ್ಗೆ ೭-೦೦ ಗಂಟೆಗೆ ನಿಧನರಾಗಿದ್ದಾರೆ. ಶ್ರೀಯುತರು ಪತ್ನಿ, ಒಬ್ಬಳು ಪುತ್ರಿ ಹಾಗೂ ೩ ಮಂದಿ ಪುತ್ರರನ್ನು, ಸಹೋದರರನ್ನು ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರು ಆರಂತೋಡು ಮಲ್ಲಿಕಾರ್ಜುನ ಭಜನಾ ಮಂಡಳಿಯ ಮಾಜಿ ಸದಸ್ಯರಾಗಿದ್ದರು ಮತ್ತು ೬೦೦ ಕ್ಕಿಂತ ಹೆಚ್ಚು ಹರೀಕಿರ್ತನೆ ಮತ್ತು ಭಜನೆಗಳನ್ನು ಕಂಠಪಾಠ ಮಾಡಿ ಸುಶ್ರಾವ್ಯ ಭಜನೆ ಗಳನ್ನು ಇತ್ತೀಚಿನವರೆಗೂ ಹಾಡುತ್ತಿದ್ದರು.