ಸುಳ್ಯ ಕೇರ್ಪಳ ನಿವಾಸಿ ಯತೀಶ್ ಪೂಜಾರಿ (32) ಎಂಬ ಯುವಕ ಜಾಂಡಿಸ್ ಕಾಯಿಲೆಯಿಂದ ಕಾಸರಗೋಡಿನ ಆಸ್ಪತ್ರೆಯಲ್ಲಿ ನಿಧನರಾದ ಘಟನೆ ವರದಿಯಾಗಿದೆ.
ಕೆಲ ದಿನಗಳ ಹಿಂದೆ ಜ್ವರ ಬಂದಾಗ ಔಷಧ ಪಡೆದಿದ್ದರು. ಜ್ವರ ಕಡಿಮೆಯಾಗದಾಗ ಪರೀಕ್ಷೆ ನಡೆಸಿದಾಗ ಜಾಂಡಿಸ್ ಇರುವುದು ಗೊತ್ತಾಯಿತು. ಇತ್ತೀಚೆಗೆ ತೀವ್ರ ಅಸ್ವಸ್ಥಗೊಂಡಾಗ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಇಂದು ಮಧ್ಯಾಹ್ನದ ವೇಳೆಗೆ ಮೃತಪಟ್ಟರೆಂದು ತಿಳಿದುಬಂದಿದೆ.



ಮೃತರು ತಾಯಿ, ಸಹೋದರರು, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.