ಡಿ.29 ರಂದು ಸುಳ್ಯದಲ್ಲಿ ಬಂಟರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ-ವಿದ್ಯಾರ್ಥಿ ವೇತನ ವಿತರಣೆ

0


ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಮತ್ತು ಬಂಟರ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಾರ್ಷಿಕ ಮಹಾಸಭೆಯು ಡಿ.೨೯ರಂದು ಆಶಾಪ್ರಕಾಶ ಶೆಟ್ಟಿ ಭಂಟರ ಭವನದಲ್ಲಿ ನಡೆಯಲಿದೆ.


ಸಮಾರಂಭವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ನಿರ್ದೇಶಕ, ಸಹಕಾರಿ ರತ್ನ ಅಗರಿ ನವೀನ್ ಭಂಡಾರಿ, ಅಭಿಮತ ಟಿ.ವಿ. ಆಡಳಿತ ಪಾಲುದಾರರಾದ ಡಾ|ಮಮತಾ ಪಿ.ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಎಂ., ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ, ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ, ನಿವೃತ್ತ ಶಿಕ್ಷಕ ಶೇಷಪ್ಪ ರೈ, ಬಂಟರ ಸಂಘ ಬೆಂಗಳೂರು ಇದರ ವಿದ್ಯಾರ್ಥಿ ವೇತನ ಮತ್ತು ಪ್ರಶಸ್ತಿ ಸಮಿತಿ ಚೇರ್‌ಮ್ಯಾನ್ ಉಮೇಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ನಿರ್ದೇಶಕಿ ಶ್ರೀಮತಿ ಶೋಭಾ ಶೇಖ ಭಾಗವಹಿಸಲಿದ್ದಾರೆ.


ವಾರ್ಷಿಕ ಮಹಾಸಭೆ
ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ೨ ರಿಂದ ವಾರ್ಷಿಕ ಮಹಾಸಭೆ ನಡೆಯುವುದು. ಅಪರಾಹ್ನ ೩ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.