ಅಮರಮುಡ್ನೂರು:ರಾಗಿಯಡ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

0

ಅಮರಮುಡ್ನೂರು ಗ್ರಾಮದ ರಾಗಿಯಡ್ಕ ಎಂಬಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಡಿ. 22 ರಂದುನೆರವೇರಿಸಲಾಯಿತು. ಶಾಸಕರ ವಿಶೇಷ ನಿಧಿಯಿಂದ ರಸ್ತೆ ಕಾಮಗಾರಿಗೆ ರೂ. 2.30 ಲಕ್ಷ ಅನುದಾನ ಒದಗಿಸಿಕೊಟ್ಟಿರುತ್ತಾರೆ. ಪಂಚಾಯತ್ ಸದಸ್ಯೆ ದಿವ್ಯ ಮಡಪ್ಪಾಡಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಮಹೇಶ್ ಮೇರ್ಕಜೆ, ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ದೊಡ್ಡಿಹಿತ್ಲು, ಮಾಜಿ ಸದಸ್ಯ ತಿಮ್ಮಪ್ಪ ಕೊಂಡೆಬಾಯಿ ಹಾಗೂ ಗಣೇಶ್ ಹಿರಿಯಡ್ಕ, ಪ್ರದೀಪ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.