ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.02 ರಿಂದ ಜ.11 ರವರೆಗೆ ನಡೆಯಲಿದ್ದು ಡಿ.27 ರಂದು ಗೊನೆಮುಹೂರ್ತ ನಡೆಯಿತು.
ಶ್ರೀ ದೇವರಿಗೆ ವಿಶೇಷ ಪೂಜೆ ,ಪ್ರಾರ್ಥನೆ ನಡೆದ ಬಳಿಕ ಗೊನೆ ಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ,ಎನ್.ಜಯಪ್ರಕಾಶ್ ರೈ ,ಲಿಂಗಪ್ಪ ಗೌಡ ಕೇರ್ಪಳ , ವೀರಕೇಸರಿ ಕರಣಿಕ ಮನೆ,ಗಿರಿಜಾಶಂಕರ ತುದಿಯಡ್ಕ,ರಾಮಕೃಷ್ಣ ರಾವ್ ಮುರೂರು ಕಾಪಿನಡ್ಕ, ಕೃಪಾಶಂಕರ ತುದಿಯಡ್ಕ,ಡಾ.ಲೀಲಾಧರ್,ಶ್ರೀಮತಿ ಶಶಿಕಲಾ ಹರಪ್ರಸಾದ್,
ಮೋನಪ್ಪ ಕೆರೆಮೂಲೆ ಮತ್ತು ಹೇಮನಾಥ ಕೇರ್ಪಳ ಹಾಗು ಭಕ್ತಾದಿಗಳು ಉಪಸ್ಥಿತರಿದ್ದರು.