ಮಿತ್ತೂರು ದೈವಗಳ, ಕಾನತ್ತಿಲ ದೈವಗಳ ಭಂಡಾರ ಆಗಮನ
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಜ.,09 ರಂದು ರಾತ್ರಿ ಮಿತ್ತೂರು ದೈವಗಳ ಮತ್ತು ಕಾನತ್ತಿಲ ದೈವಗಳ ಭಂಡಾರ ಆಗಮನವಾಯಿತು.
ಬಳಿಕ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ದೇವರ ಉತ್ಸವ ಬಲಿ,ಕಟ್ಟೆ ಪೂಜೆ ನಡೆಯಿತು.
ನಂತರ ದೇವಸ್ಥಾನದ ಎದುರು ಭಾಗದಲ್ಲಿ ಶ್ರೀ ದೈವದ ನರ್ತನ ನಡೆಯಿತು.
ಬಳಿಕ ಶ್ರೀ ದೇವರಿಗೆ ದೇವಸ್ಥಾನದ ಎದುರು ಭಾಗದಲ್ಲಿ ಅಶ್ವಥ ಕಟ್ಟೆಯಲ್ಲಿ ಪೂಜೆ ನಡೆಯಿತು.
ನಂತರ ವಾಲಸಿರಿ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.