2025 ನೇ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ಗೆ ಸುಳ್ಯದ ಪ್ರತಿಷ್ಟಿತ ನೆಹರು ಮೆಮೋರಿಯಲ್ ಕಾಲೇಜಿನ ಮೂರು ಎನ್.ಸಿ.ಸಿ ಕೆಡೆಟ್‌ಗಳು ಆಯ್ಕೆಯಾಗಿರುತ್ತಾರೆ.
ಇದು ಕಾಲೇಜಿನ ಇತಿಹಾಸದಲ್ಲೇ ಒಂದು ಅಗ್ರಮಾನ್ಯ ಸಾಧನೆಯಾಗಿದೆ. ಅಂತಿಮ ಬಿ.ಎ ಪದವಿಯ ಸಿ.ಎಸ್.ಯು.ಒ ಚೇತನ್ ಕೆ. ಇವರು ಕರ್ತವ್ಯಪಥ್ ಪೆರೇಡ್‌ಗೆ, ಅಂತಿಮ ಬಿ.ಕಾಂ ಪದವಿಯ ಸಿ.ಯು.ಒ ಕೃಷ್ಣ ಕೆ.ಎಲ್ ಇವರು ಪಿ.ಎಂ ರ್‍ಯಾಲಿ ಮತ್ತು ಪ್ಲ್ಯಾಗ್ ಏರಿಯಾ ವಿಭಾಗಕ್ಕೆ, ದ್ವಿತೀಯ ಬಿ.ಸಿ.ಎ ಪದವಿಯ ಎಸ್.ಜಿ.ಟಿ ಚಲನಾ.ಟಿ ಇವರು ಪಿ.ಎಂ ರ್‍ಯಾಲಿಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳಾಗಿರುವ ಸೀತಾರಾಮ ಎಂ.ಡಿ ಇವರು ಮಾರ್ಗದರ್ಶನವನ್ನು ನೀಡಿರುತ್ತಾರೆ.
ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಪೋಷಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.