ಸುಳ್ಯ ಪಿ.ಎಲ್.ಡಿ. ಬ್ಯಾಂಕಿನ 7 ಸ್ಥಾನಕ್ಕೆ ಇಂದು ಚುನಾವಣೆ – ಬೆಳಗ್ಗಿನಿಂದ ಮತದಾನ ಪ್ರಕ್ರಿಯೆ ಆರಂಭ

0

ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ 7 ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆ ಇಂದು ನಡೆಯುತ್ತಿದೆ. ಒಟ್ಟು 14 ನಿರ್ದೇಶಕರ ಆಯ್ಕೆಯಲ್ಲಿ ಈಗಾಗಲೇ 7 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಒಟ್ಟು 14 ವಲಯಗಳಲ್ಲಿ 23 ನಾಮಪತ್ರ ಸಲ್ಲಿಕೆಯಾಗಿದ್ದು ಚುನಾವಣೆ ನಡೆಯಲಿರುವ 7 ಸ್ಥಾನಗಳಿಗೆ 16 ಮಂದಿ ಕಣದಲ್ಲಿದ್ದಾರೆ.

ಜಾಲ್ಸೂರು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ರೈ ಕೆ ಮತ್ತು ಬಂಡಾಯ ಅಭ್ಯರ್ಥಿ ಸುರೇಶ್ ಕೆ, ನೆಲ್ಲೂರು ಕೆಮ್ರಾಜೆ ಹಿಂದುಳಿದ ವರ್ಗ ಬಿ” ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾವೀರ ಜಿ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ದೇವಿಪ್ರಸಾದ್ ಎಸ್,ಸುಳ್ಯ ಹಿಂದುಳಿದ ವರ್ಗ ಎ” ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮನಾಥ ಕೆ, ಬಂಡಾಯ ಅಭ್ಯರ್ಥಿ ಜ್ಞಾನೇಶ್ವರ ಶೇಟ್, ಆಲೆಟ್ಟಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯ ಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೆ, ಐವರ್ನಾಡು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪಯ್ಯ ಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಪಿ, ಗುತ್ತಿಗಾರು ಕ್ಷೇತ್ರದಲ್ಲಿ ಪ.ಪಂ.ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಿ ಕೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಬಿ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅವಿನಾಶ್ ಡಿ.ಕೆ ಮತ್ತು ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು‌ ರವರು ಕಣದಲ್ಲಿದ್ದಾರೆ. ಇಂದು ಬೆಳಗ್ಗಿನಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಸುಳ್ಯ ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ಪ್ರವೇಶ ಗೇಟಿನ ಬಳಿ ಬೂತ್ ನಲ್ಲಿ ಜಮಾಯಿಸಿದ್ದಾರೆ.