ಜೇಸಿಐ ಪಂಜ ಪಂಚಶ್ರೀಯಿಂದ ನಿರಂತರ ಸಮಾಜ ಮುಖಿ ಕಾರ್ಯಕ್ರಮ: JFP ರವೀಂದ್ರ ಪಾಟಾಳಿ
ಜೇಸಿಐ ಪಂಜ ಪಂಚಶ್ರೀ, ಪಶು ಸಂಗೋಪನಾ ಇಲಾಖೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ 23 ನೇ ವರ್ಷದ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಜ.12 ರಂದು ಪಂಜ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಉದ್ಘಾಟನೆ ಗೊಂಡಿತು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JC ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ ಕಾರ್ಯದರ್ಶಿ ರವಿಚಂದ್ರ ಪಾಟಾಳಿ ಉದ್ಘಾಟಿಸಿ ಮಾತನಾಡಿ ” ಸತತ ಸಮಾಜ ಮುಖಿ ಕಾರ್ಯಕ್ರಮಗಳಿಂದ ಜೇಸಿಐ ಪಂಜ ಪಂಚಶ್ರೀ ಉತ್ತಮ ಘಟಕವಾಗಿ ಬೆಳೆದಿದೆ. , ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಕಾರ್ಯಕ್ರಮ ಕೂಡ ಅತ್ಯಂತ ಅವಶ್ಯಕ ಕಾರ್ಯಕ್ರಮ.” ಎಂದು ಹೇಳಿದರು.
ಸುಳ್ಯ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ಮಾತನಾಡಿ “ರೇಬಿಸ್ ಎಂಬುದು ಮಾರಾಣಾಂತಿಕ ಕಾಯಿಲೆ. ಇದೇ ರೀತಿ ಎಲ್ಲೆಡೆ ಲಸಿಕೆಗಳು ನಿರಂತರ ನಡೆದರೆ ಮಾತ್ರ ಇದರ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿದೆ. ಈ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಿದೆ.”ಎಂದು ಹೇಳಿದರು.
ಅತಿಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ, ಕಡಬ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಜಿತ್, ಗುತ್ತಿಗಾರು ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ಜೇಸಿಐ ಪಂಜ ಪಂಚಶ್ರೀ ನಿಕಟಪೂರ್ವಾಧ್ಯಕ್ಷ ಜೀವನ್ ಮಲ್ಕಜೆ, ಕಾರ್ಯದರ್ಶಿ ಅಶ್ವಥ್ ಬಾಬ್ಲುಬೆಟ್ಟು, ಕಾರ್ಯಕ್ರಮ ನಿರ್ದೇಶಕ ದೇವಿಪ್ರಸಾದ್ ಚಿಕ್ಮುಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚರಣ್ ದೇರಪ್ಫಜ್ಜನಮನೆ ವೇದಿಕೆಗೆ ಆಹ್ವಾನಿಸಿದರು. ಕಿರಣ್ ಕಂರ್ಬುನೆಕ್ಕಿಲ ಜೇಸಿ ವಾಣಿ ನುಡಿದರು. ಅಶೋಕ್ ನಿಡುಬೆ ಅತಿಥಿಯನ್ನು ಪರಿಚಯಿಸಿದರು. ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು. ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು. ಲಸಿಕೆಯು ಪಡ್ಪಿನಂಗಡಿ, ಪಲ್ಲೋಡಿ, ಕೇನ್ಯ, ಕೃಷ್ಣನಗರ, ಪಂಜ ದೇಗುಲದ ಬಳಿ, ಕಂರ್ಬು ನೆಕ್ಕಿಲ ಬಸ್ ನಿಲ್ದಾಣ ಬಳಿ, ಹೇಮಳ ಶಾಲೆ ಬಳಿ, ಶಾಂತಿನಗರ, ಹಾಲೆಮಜಲು ಬಸ್ ನಿಲ್ದಾಣದ ಬಳಿ. 9 ಮಾರ್ಗಗಳಲ್ಲಿ ನಿಗದಿ ಪಡಿಸಿದ 130 ಕೇಂದ್ರಗಳಲ್ಲಿ ನಡೆಯಿತು.