ವಿವೇಕಾನಂದರ ಆದರ್ಶಗಳು ಎಲ್ಲರಿಗೂ ಪ್ರೇರಣೆ – ಹರೀಶ್ ಬಂಟ್ವಾಳ್
ಸುಳ್ಯದ ವಿವೇಕಾನಂದ ಸರ್ಕಲ್ ನಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಜ.12 ರಂದು ನಡೆಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ರವರು ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿ ಎಲ್ಲರಿಗೂ ಆತ್ಮಾಭಿಮಾನವನ್ನು ಮೂಡಿಸಿದಂತಹ ಸಂತ ಸ್ವಾಮಿ ವಿವೇಕಾನಂದರು. ಇಡೀ ಭಾರತ ದೇಶವನ್ನು ಸುತ್ತಿ ಚಿಂತನೆಯ ಮುಖಾಂತರ ದೇಶದಲ್ಲಿ ಸುಧಾರಣೆ ಮಾಡಿದ್ದಾರೆ.ಯುವ ಜನರಿಗೆ ಸ್ಪೂರ್ತಿ ತುಂಬಿದ್ದಾರೆ.ಇವರ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯದ ಸೇವಾ ಭಾರತಿ ಹೆಲ್ಪ್ ಲೈನ್ ಅಧ್ಯಕ್ಷ ಡಾ.ಮನೋಜ್ ಅಡ್ಡಂತಡ್ಕ,ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಶೀಲಾವತಿ ಕುರುಂಜಿ, ಶ್ರೀಮತಿ ಕಿಶೋರಿ ಶೇಟ್, ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನಾರಾಯಣ ಶಾಂತಿನಗರ, ಶಿವಕುಮಾರ್ ಕೊಯಿಂಗೋಡಿ, ವರದಿಗಾರ ಗಣೇಶ್ ಕುಕ್ಕುದಡಿ, ಅರುಣ್ ಕುರುಂಜಿ, ವಿವೇಕಾನಂದ ಸರ್ಕಲ್ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದು ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ರಾಜೇಶ್ ಮೇನಾಲ ಸ್ವಾಗತಿಸಿ,ವಂದಿಸಿದರು.