ಸ.ಹಿ ಪ್ರಾ ಶಾಲೆ ಮುರುಳ್ಯ ಶಾಂತಿನಗರದಲ್ಲಿ ಜ. 11ರಂದು ಮಕ್ಕಳ ಮೆಟ್ರಿಕ್ ಮೇಳ ನಡೆಯಿತು. ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ನಡುಬೈಲು ವಹಿಸಿ ಮೇಳಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸೀತಾ ವಿ, ಹಿರಿಯ ಶಿಕ್ಷಕಿ ಉಷಾ ಹೇಮಳ, ಉಪಾಧ್ಯಕ್ಷೆ ಬೇಬಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರು ಮೆಟ್ರಿಕ್ ಮೇಳದ ಆಯೋಜನೆ ಬಗ್ಗೆ ವಿವರಿಸಿದರು. ಸಭೆಯಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು. ಸಹಶಿಕ್ಷಕಿ ಹರ್ಷಿತ ಸ್ವಾಗತಿಸಿ, ಉಷಾ ಹೇಮಳ ವಂದಿಸಿದರು. ನಂತರ ವಿದ್ಯಾರ್ಥಿಗಳೇ ತಯಾರಿಸಿದ ಅಂಗಡಿ ಸ್ಟಾಲ್ ಗಳಲ್ಲಿ ಮನೆಯಲ್ಲಿ ಬೆಳೆಸಿದ ವಿವಿಧ ತರಕಾರಿಗಳು, ತಂಪುಪಾನಿಯ, ಪ್ಯಾನ್ಸಿ ವಸ್ತುಗಳು ವಿವಿಧ ರೀತಿಯ ಮನೆಯಲ್ಲೇ ತಯಾರಿಸಿದ ತಿಂಡಿತಿನಿಸು ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿದರು. ಮೇಳದಲ್ಲಿ ಊರಿನವರು ಪೋಷಕರು ಶಾಲಾಭಿಮಾನಿಗಳು ವಸ್ತುಗಳನ್ನು ಖರೀದಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.