ಸುಳ್ಯ ಚೆನ್ನಕೇಶವ ದೇವರ ಪಟ್ಟಣ ಸವಾರಿ

0

ಪೋಲಿಸ್ ಠಾಣೆ ಮತ್ತು ಅರಣ್ಯ ಇಲಾಖೆಯ ಕಟ್ಟೆಯಲ್ಲಿ ಪೂಜೆ

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಕೊನೆಯ ದಿನದಂದು ಪಟ್ಟಣ ಸವಾರಿಯು ದೇವಳದಿಂದ ಹೊರಟು ಪೋಲಿಸ್ ಠಾಣೆ ಮತ್ತು ಗಾಂಧಿನಗರ ಅರಣ್ಯ ಇಲಾಖೆಯ ಕಚೇರಿ ಮುಂಭಾಗದಲ್ಲಿರುವ ಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆಯು ನೆರವೇರಿತು. ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರು ಹಾಗೂ ಆಡಳಿತ ಮಂಡಳಿಯವರು, ಭಕ್ತಾದಿಗಳು ಜತೆಯಲ್ಲಿದ್ದರು.

ಇಲಾಖೆಯ ಅಧೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹೂವಿನಿಂದ ಮತ್ತು ತಳಿರು ತೋರಣ ಹಾಗೂ ಆಕರ್ಷಕ ವಿದ್ಯುದೀಪಗಳಿಂದ ಕಟ್ಟೆಯ ಪರಿಸರವನ್ನು ಶೃಂಗರಿಸಲಾಗಿತ್ತು. ಇಲಾಖೆಯ ಅಧಿಕಾರಿಗಳು ಮತ್ತು ‌ಸಿಬ್ಬಂದಿವರ್ಗದವರು ಸಾಂಪ್ರದಾಯಿಕ ಸಮವಸ್ತ್ರ ಧರಿಸಿದ್ದರು.
ಆಗಮಿಸಿದ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು
.