ಸುಳ್ಯದ ಗಾಂಧಿನಗರ ದಲ್ಲಿರುವ ಪಯಸ್ವಿನಿ ಸರ್ವಿಸ್ ಸ್ಟೇಷನ್ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಲಕ್ಕಿ ಕೂಪನ್ ನೀಡಲಾಗಿದ್ದು ಇದರ ಮೆಗಾ ಬಂಪರ್ ಡ್ರಾವನ್ನು ಜ.11 ರಂದು ನಡೆಸಲಾಯಿತು.
ಗ್ರಾಹಕರು ತಮ್ಮ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸಲ್ ತುಂಬಿಸಿದ ಸಲುವಾಗಿ ಲಕ್ಕಿ ಕೂಪನ್ ನೀಡಿ ಪ್ರತಿ ವಾರಕ್ಕೊಮ್ಮೆ ಆನ್ ಲೈನ್ ಮೂಲಕ ಡ್ರಾ ನಡೆಸಿ ವಿಜೇತ ಗ್ರಾಹಕರಿಗೆ ಬಹುಮಾನ ನೀಡಲಾಗಿತ್ತು.
ಇದರ ಮೆಗಾ ಬಂಪರ್ ಡ್ರಾ ವನ್ನು ಸುಳ್ಯ ಜಾತ್ರೋತ್ಸವ ಸಂದರ್ಭದಲ್ಲಿ ನಡೆಸಲಾಯಿತು. ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಹಾಗೂ ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಯವರು ಡ್ರಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಶುದ್ದೀನ್ ಗಾಂಧಿನಗರ ಹಾಗೂ ಪಾಲುದಾರರಾದ ಮುಸ್ತಾಫ ಗಾಂಧಿನಗರ, ಮುಜೀಬ್ ಗಾಂಧಿನಗರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಥಮ ಬಂಪರ್ ಬಹುಮಾನ ಅಬ್ದುಲ್ ಮಜೀದ್ ಗಾಂಧಿನಗರ ಪಡೆದರು. ದ್ವಿತೀಯ ಬಹುಮಾನವು ಮಂಜು ರೇಖಾ ರವರಿಗೆ ಲಭಿಸಿದೆ.