ಎಡಮಂಗಲ ದೇವಸ್ಥಾನ: ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ 5 ದಿವಸಗಳ ಉತ್ಸವಾದಿಗಳು ಫೆಬ್ರವರಿ 12 ರಿಂದ 18 ರವರೆಗೆ ನಡೆಯಲಿದ್ದು, ಆಮಂತ್ರಣ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮಯ್ಯ ಕೇಂಜೂರು ರವರ ವೈದಿಕ ಕಾರ್ಯಕ್ರಮ ಗಳೊಂದಿಗೆ ಆಮಂತ್ರಣ ಬಿಡುಗಡೆ ಗೊಂಡಿತು. ಈ ಸಂದರ್ಭದಲ್ಲಿ ಪವಿತ್ರ ಪಾಣಿ ಶ್ರೀಹರಿ ನೂಚಿಲ ಶ್ಯಾಮ್ ಭಟ್ ನಡುಬೈಲು, ಗಿರೀಶ್ ನಡುಬೈಲು, ಬಾಲಕೃಷ್ಣ ಬಲಕ್ಕಬೆ, ಅನಂತಪದ್ಮನಾಭ ಪರ್ಲ, ರವೀಂದ್ರ ದೇರಳ , ಜೀವೇಂದ್ರ ಕಾಯ್ತಿಮಾರು , ಪದ್ಮಯ್ಯ ನಾಯಕ್, ಜೀವೇಂದ್ರ ಪೂಜಾರಿ, ಪದ್ಮನಾಭ ಪುಲಿಕುಕ್ಕು, ಸಿಬ್ಬಂದಿ ರವೀಂದ್ರ ಮಾಲೆಂಗಿರಿ ಇನ್ನಿತರರು ಉಪಸ್ಥಿತರಿದ್ದರು.