ಸುಳ್ಯ ಕಸಬಾಮೂಲೆ ಸಂಚಾರಿ ಗುಳಿಗ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ – ನೇಮೋತ್ಸವದ ಸಭೆ

0

ಸುಳ್ಯ ಕಸಬಾಮೂಲೆ ಜೂನಿಯರ್ ಕಾಲೇಜು ಬಳಿ ಸಂಚಾರಿ ಗುಳಿಗ ಸ್ಥಾನದಲ್ಲಿ ಸಂಕ್ರಮಣ ಪೂಜೆ ಮತ್ತು ನೇಮೋತ್ಸವದ ಬಗ್ಗೆ ಸಭೆಯು ಜ.14 ರಂದು ನಡೆಯಿತು.
ಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.


ಬಳಿಕ ವರ್ಷಂಪ್ರತಿ ನಡೆಯುವ ಸಂಚಾರಿ ಗುಳಿಗ ದೈವದ ಕೋಲದ ಬಗ್ಗೆ ಸಭೆ ನಡೆಸಲಾಯಿತು.ಫೆಬ್ರವರಿ ತಿಂಗಳಲ್ಲಿ ಕೋಲ ನಡೆಸುದೆಂದು ನಿರ್ಣಯಿಸಲಾಯಿತು.


ಈ ಸಂದರ್ಭದಲ್ಲಿ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಸಂಕಪ್ಪ ಗೌಡ ನೀರ್ಪಾಡಿ,ಅಧ್ಯಕ್ಷ ರಘುನಾಥ ಶೆಟ್ಟಿ, ಉಪಾಧ್ಯಕ್ಷ ನೋಣಪ್ಪ ಗೌಡ ಕಲ್ಕುದಿ,ಕೋಶಾಧಿಕಾರಿ ಮಹಾಲಿಂಗನ್ ಬಾಜರ್ ತೊಟ್ಟಿ,ಜತೆ ಕಾರ್ಯದರ್ಶಿ ಲವ ಕುಮಾರ್ ಕನ್ನಡ್ಕ, ನಿರ್ದೇಶಕ ದಿನೇಶ್ ಕುಮಾರ್ ಕೆ.ಸಿ. ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಳಿ ಮಾವಂಜಿ ಸ್ವಾಗತಿಸಿ ವಂದಿಸಿದರು.