ಮುಪ್ಪೇರ್ಯ ಗ್ರಾಮದ ಜೋಗೀಬೆಟ್ಟು ನಿವಾಸಿ ನಿವೃತ್ತ ಶಿಕ್ಷಕ ಸದಾಶಿವ ಭಟ್ ಜೋಗಿಬೆಟ್ಟು ರವರು ಜ. 12 ರಂದು ಅಲ್ಫಾಕಾಲದ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಯಲ್ಲಿ ಪ್ರಾಢಶಾಲಾ ಶಿಕ್ಷಕರಾಗಿ 39 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದವರು. ಜನ ಮೆಚ್ಚಿದ ಶಿಕ್ಷಕರಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು. ಪ್ರವೃತ್ತಿಯಲ್ಲಿ ಕವಿಗಳು, ಸಾಹಿತಿಗಳು, ತರಬೇತಿದಾರರು, ವಾಗ್ಮಿಗಳಾಗಿ ಪ್ರಸಿದ್ಧಿ ಪಡೆದವರು.
ಮೃತರು ಪತ್ನಿ ನಿವೃತ್ತ ಪ್ರಾಢಶಾಲಾ ಶಿಕ್ಷಕಿ ನಾರಾಯಣಿ ಎಸ್ ಹಾಗೂ ಪುತ್ರರಾದ ಗೋವಿಂದದಾಸ್ ಕಾಲೇಜ್ ಸುರತ್ಕಲ್ ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯ ಸ್ಥರಾದ ಡಾ. ಕಾರ್ತಿಕ್ ಜೆ ಎಸ್, ಚಿನ್ಮಯ ಜೆ ಎಸ್, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು,ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.