ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಗರಡಿಯ ದೈವಗಲಾದ, ಬ್ರಹ್ಮರ ಗುಡಿ, ಕಾಜು ಕುಜಂಬ ಮತ್ತು ಇಷ್ಟ ದೇವತೆ ದೈವಸ್ಥಾನ ಜೀರ್ಣೋದ್ಧಾರ ಸಲುವಾಗಿ ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಜ.14 ರಂದು ತಾಂಬೂಲ ಪ್ರಶ್ನೆ ಇಡಲಾಯಿತು.
ಕಾಸರಗೋಡು ಜಯಚಂದ್ರನ್ ತಾಂಬೂಲ ಪ್ರಶ್ನೆ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಶ್ರೀಮತಿ ಪದ್ಮ. ಆರ್.ಶೆಟ್ಟಿ, ಶ್ರೀಮತಿ ಮಂಜುಳಾ ಶೆಟ್ಟಿ, ಚಿಕ್ಕ ರಾಜೇಂದ್ರ ಶೆಟ್ಟಿ, ಶ್ರೀಮತಿ ಶರ್ಮೀಲಾ ಅತುಲ್ ಶೆಟ್ಟಿ, ಅಶೋಕ್ ಕುಮಾರ್.ರೈ. ಕಟ್ಟಬೀಡು, ರಘುನಾಥ ರೈ. ಕೆ.ಎನ್, ನ್ಯಾಯವಾದಿ ರಾಧಾಕೃಷ್ಣ.ರೈ, ಭಾಸ್ಕರ ರೈ ಕಟ್ಟ, ನಾಗೇಶ್ ಆಳ್ವ, ಸುಧೀರ್ ಕುಮಾರ್ ಶೆಟ್ಟಿ ಕೆ, ಅನಿಲ್. ರೈ ಕಟ್ಟಬೀಡು, ಎನ್.ಜಿ. ಲೋಕನಾಥ ರೈ ಎಣ್ಮೂರು, ರಘುಪ್ರಸಾದ್ ಶೆಟ್ಟಿ, ಗಿರಿಪ್ರಸಾದ್ ರೈ ಕಟ್ಟಬೀಡು, ಜಗನ್ನಾಥ ರೈ ಕುಲೈತೊಡಿ, ಇನ್ನಿತರರು ಉಪಸ್ಥಿತರಿದ್ದರು.