ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ಸದಸ್ಯರಾದ ಕಲ್ಲುಮುಟ್ಲು ಜಯರಾಮನ್ ನಾಯರ್ ಅವರ ಧರ್ಮಪತ್ನಿ ಲಕ್ಷ್ಮಿಯವರು ಇತ್ತೀಚೆಗೆ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಅವರ ಚಿಕಿತ್ಸೆಯ ಸಹಾಯಕ್ಕಾಗಿ ಕರಯೋಗಂ ಸದಸ್ಯರಿಂದ ಸಂಗ್ರಹಿಸಿದ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ, ಕಾರ್ಯದರ್ಶಿ ಶಶಿಧರನ್ ನಾಯರ್ ಉಬರಡ್ಕ, ಕೋಶಾಧಿಕಾರಿ ಪ್ರಭಾಕರನ್ ನಾಯರ್ ಸ್ವಾಗತ್, ಬೋರ್ಡ್ ಮೆಂಬರ್ಗಳಾದ ಭಾಸ್ಕರನ್ ನಾಯರ್ ಮಧುವನ, ಬಾಲಕೃಷ್ಣ ನಾಯರ್ ಎಸ್.ಬಿ., ಉಪ ಖಜಾಂಜಿ ಸಿ.ಎಚ್.ಪ್ರಭಾಕರನ್ ನಾಯರ್, ನಿರ್ದೇಶಕ ಪ್ರಮೋದ್ ಸ್ವಾಗತ್ ಉಪಸ್ಥಿತರಿದ್ದರು.