ಸುಳ್ಯ ಸೀಮೆ ದೇವಸ್ಥಾನವಾಗಿರುವ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಧನು ಮಾಸ ಸಂದರ್ಭದಲ್ಲಿ ದಾನಿಗಳ ಸಹಕಾರದಿಂದ ರೂ.50 ಸಾವಿರ ವೆಚ್ಚದಲ್ಲಿ ಮೈಕ್ ಸೆಟ್ ಸೌಲಭ್ಯ ಕಲ್ಪಿಸಲಾಗಿದೆ.
ದೇವಸ್ಥಾನಕ್ಕೆ ಮೈಕ್ ಸೌಲಭ್ಯ ಕೊಡಿಸುವಲ್ಲಿ ನೇತೃತ್ವ ವಹಿಸಿದ ಪೆರಾಜೆಯ ಪಿ.ಬಿ.ಸುಧಾಕರ ರೈಯವರನ್ನು ದೇವಸ್ಥಾನದಲ್ಲಿ ಇತ್ತೀಚೆಗೆ ಗೌರವಿಸಲಾಯಿತು.
ಸುಧಾಕರ ರೈಯವರು ವಾಟ್ಸಾಪ್ ಗ್ರೂಪ್ ನಲ್ಲಿ ದೇವಸ್ಥಾನಕ್ಕೆ ಮೈಕ್ ಅವಶ್ಯಕತೆ ಕುರಿತು ವಿವರ ಹಾಕಿದರಲ್ಲದೆ, ದಾನಿಗಳ ಸಹಕಾರ ಕೋರಿದ್ದರು. ಇದಕ್ಕೆ ಸ್ಪಂದನೆ ನೀಡಿದ ದೇವಸ್ಥಾನದ ಭಕ್ತರು ತಮ್ಮಿಂದಾದ ದೇಣಿಗೆಯನ್ನು ನೀಡತೊಡಗಿದರು. ಈ ಹಣದಲ್ಲಿ ದೇವಸ್ಥಾನಕ್ಕೆ ಮೈಕ್ ಸೆಟ್ ನ್ನು ಒದಗಿಸಲಾಗಿದೆ.