ಈಶ್ವರ ಭಟ್ ಮಂಜುಳಗಿರಿಯವರಿಗೆ ಹವ್ಯಕ ಶಿಕ್ಷಕ ರತ್ನ

0

ಕೂತ್ಕುಂಜ ಗ್ರಾಮದ ಈಶ್ವರ ಭಟ್ ಮಂಜುಳಗಿರಿ ರವರಿಗೆ ಬೆಂಗಳೂರನಲ್ಲಿ ನಡೆದ ಶ್ರೀ ಅಖಿಲ ಹವ್ಯಕ ಮಹಾಸಭೆಯು “ಹವ್ಯಕ ಶಿಕ್ಷಕ ರತ್ನ’ ನೀಡಿ ಗೌರವಿಸಲಾಯಿತು.

ದ.ಕ. ಜಿಲ್ಲಾ ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದಲ್ಲಿ .1954 ರಲ್ಲಿ, ಬಂಟಮಲೆಯ ತಟದ ಇಟ್ಕಡ್ಕ ಎಂಬಲ್ಲಿ ಗ್ರಾಮದೇವರಾದ ಶ್ರೀ ಸದಾಶಿವ ಪಂಚಲಿಂಗೇಶ್ವರನ ಹೆಸರಲ್ಲಿಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ ಸಂಸ್ಥಾಪಕರು. ತಾಲ್ಲೂಕಿನ ಮೊದಲ ಸರಕಾರಿಅನುದಾನಿತ ಶಾಲೆಯನ್ನು ಆರಂಭಿಸಿ ಅದರ ಸಂಚಾಲಕರಾಗಿ, ಮುಖ್ಯೋಪಾಧ್ಯಾಯರಾಗಿ ಹಿಂದುಳಿದ ಹಳ್ಳಿಯ ಬಡ ಅವಿದ್ಯಾವಂತ ಮಕ್ಕಳಿಗೆ ಉಚಿತವಾಗಿ ವಿದ್ಯಾದಾನದ ಸಾರ್ಥಕತೆ.

ಹಿರಿಯ ಪ್ರಾಥಮಿಕ ಶಾಲೆಗೆ ಮುಂಬಡ್ತಿ ಪಡೆದು ಊರ ಪರಊರ ಮಹಾಜನತೆಯ ಸಹಾಕಾರದಿಂದ ಸುಸಜ್ಜಿತ ಜಾಗಕ್ಕೆ ಸ್ಥಳಾಂತರಗೊಳಿಸಿ ಹೊಸ ಶಿಕ್ಷಕರಿಗೂ ಸೇವೆ ಮಾಡಲು ಅವಕಾಶ. ಮದ್ರಾಸ್ ಶಿಕ್ಷಣ ಇಲಾಖೆಯ ಶಿಕ್ಷಕ ತರಬೇತಿ ಕೇರಳದ ಮಾಯಾಡಿಯಲ್ಲಿ(1954-55 ), ಸುಳ್ಯ ತಾಲೂಕು ಶಿಕ್ಷಕ ರಕ್ಷಕ ಸಂಘದ ಪುರಸ್ಕಾರ (1988),ಶ್ರೇಷ್ಠ ಸಾಧಕ ಮುಖ್ಯೋಪಾಧ್ಯಾಯ ದಿ| ಕುರುಂಜಿ ವೆಂಕಟರಮಣ ಗೌಡರಿಂದ ಸನ್ಮಾನ (1990), ರಾಜ್ಯ ಮಟ್ಟದ ಮಕ್ಕಳಮೇಳ ಸಂಯೋಜನೆ-ಉಜಿರೆ ದಕ್ಷಣಕನ್ನಡ- ಬೆಸ್ಟ್ ಲೀಡರ್‌ಶಿಪ್‌ ಅವಾರ್ಡ್ ಶ್ರೀ ಧರ್ಮಸ್ಥಳ ಹೆಗ್ಗಡೆಯವರಿಂದ,ಭಾರತ್ ಸೌಟ್ಸ್ ಮತ್ತುಗೈಡ್ಸ್ ಅವಾರ್ಡ್ ವಿನ್ನರ್, ಕುಲಗುರುಗಳಾದ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಚಾತುಮಾಸ್ಯ ಪುರಸ್ಕಾರ (2018), ಸಾರ್ಥಕಜೀವನದ ಸವಿ ನೆನಪಿಗಾಗಿ ಮಂಜುಳಯಾನ (ಆತ್ಮಾವಲೋಕನ-ಸ್ವಕೃತಿ) ಶ್ರೀಸಂಸ್ಥಾನದವರಿಂದ ಲೋಕಾರ್ಪಣೆ (2021) ಇವರ ಸಾಧನೆಯನ್ನು ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭೆಯು “ಹವ್ಯಕ ಶಿಕ್ಷಕ ರತ್ನ’ ಎಂಬ ಸಮ್ಮಾನವನ್ನು ನೀಡಿ ಪುರಸ್ಕರಿಸಿದೆ.