ದೀಪದ ಬೆಳಕಿನಲ್ಲಿ ಕಂಗೊಳಿಸಿದ ಜಲದುರ್ಗಾದೇವಿ, ಪಲ್ಲಕ್ಕಿ ಉತ್ಸವ

0

ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ದೀಪದ ಬೆಳಕಿನಲ್ಲಿ ಜಲದುರ್ಗಾದೇವಿ ಕಂಗೊಳಿಸುವ ಅಪೂರ್ವ ದೃಶ್ಯವನ್ನು ಭಕ್ತ‌‌ ಸಮೂಹ ಕಣ್ತುಂಬಿಸಿಕೊಂಡರು.

ಜಲದುರ್ಗಾದೇವಿಗೆ ದೀಪದ ಬೆಳಕು..!


ದೇವಸ್ಥಾನದ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿ ಮಾರ್ಗದರ್ಶನದಲ್ಲಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ‌ಭಕ್ತರು ಹಚ್ಚಿದ ದೀಪದ ಬೆಳಕಿನಲ್ಲಿ ಶ್ರೀದೇವಿಯ ಬಲಿ ಹೊರಟು ಉತ್ಸವ ನೆರವೇರಿತು. ಪಲ್ಲಕ್ಕಿಯಲ್ಲಿ ಉತ್ಸವ ನೆರವೇರಿತು. ಅನಂತರ ವಸಂತ ಕಟ್ಟೆ ಪೂಜೆ, ನೃತ್ಯ ಬಲಿ, ಮಹಾಪೂಜೆ, ಶ್ರೀ ಭೂತಬಲಿ ನಡೆಯಿತು