ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು ಇಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜ. 16 ರಂದು ನಡೆಯಿತು. ಆರಂಭದಲ್ಲಿ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈವಿಧ್ಯ ನಡೆಯಿತು.
ಮುಂಡಾಜೆಗುತ್ತು ಶ್ರೀ ಚಿಕ್ಕರಾಜೇಂದ್ರ ಶೆಟ್ಟಿ ಮತ್ತು ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ರವರು ಶಾಲೆಗೆ 2023–24 ನೇ ಶೈಕ್ಷಣಿಕ ಸಾಲಿನಲ್ಲಿ ನೀಡಿದ ರೂ. 27,13,028/- ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಎಂಸಿ ಆರ್ ಶೆಟ್ಟಿ ಯವರ ದೇಣಿಗೆಯ ಶಾಶ್ವತ ಫಲಕದ ಅನಾವರಣ ನಡೆಯಿತು.
ಎಂ ಆರ್ ಪಿ ಎಲ್ ನವರು ತಮ್ಮ ಸಿ ಎಸ್ ಆರ್ ನಿಧಿಯಿಂದ ನೀಡಿದ ನೂತನ ಶೌಚಾಲಯ ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದೇರುಗಳ ಗರಡಿಯ ಆನುವಂಶಿಕ ಆಡಳಿತಗಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿರವರು ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾಲೆಯ ಇತಿಹಾಸದಲ್ಲಿಯೇ ದಾಖಲೆ ಮೊತ್ತದ ಕೊಡುಗೆಗಳನ್ನು ನೀಡಿದ ಎಂಸಿಆರ್ ಶೆಟ್ಟಿಯವರ ಬಗ್ಗೆ ಪ್ರದೀಪ್ ಕುಮಾರ್ ರೈ ಪನ್ನೆ ಅಭಿನಂದನಾ ಮಾತುಗಳನ್ನಾಡಿದರು.
ದಾನಿಗಳಾದ ಎಂಸಿಆರ್ ಶೆಟ್ಟಿ ಮತ್ತು ಎಂ ಆರ್ ಪಿ ಎಲ್ ನ ಸಹಾಯಕ ಅಭ್ಯಂತರರಾದ ಪ್ರದೀಪ್ ರಾವ್ ಅವರನ್ನು ಸನ್ಮಾನಿಸಲಾಯಿತು. ಶಾಲೆಗೆ ವಿವಿಧ ಅನುದಾನ ಒದಗಿಸಿ ಕೊಟ್ಟ ಶಾಸಕಿ ಭಾಗೀರಥಿ ಮುರುಳ್ಯ ರವರನ್ನು ಸನ್ಮಾನಿಸಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು ಕಿರಿಯ ವಯಸ್ಸಿನಲ್ಲಿಯೇ ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಕುಮಾರಿ ಅನುಜ್ಞ ಪಿ.ವಿ., ಅಂಗನವಾಡಿಯ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಕಿಶೋರಿ ಪೂದೆ, ಬಿಸಿಯೂಟ ಸಿಬ್ಬಂದಿ ಆಟೋ ಚಾಲಕಿಯಾದ ಸುನೀತ ಕಜೆ ,ಹಿರಿಯ ವಿದ್ಯಾರ್ಥಿಯಾದ ಪೊಲೀಸ್ ಇಲಾಖೆಯವರಾದ ಪದೋನ್ನತಿ ಹೊಂದಿದ ಪ್ರಾಮಾಣಿಕ ಅಧಿಕಾರಿಯಾದ ಮಹಮ್ಮದ್ ಅಲಿ ಪುತ್ತಿಗೆ ಮತ್ತು ಪಶುಸಂಗೋಪನೆ ಯಲ್ಲಿ ಸಾಧನೆಗೈದ ಶಿವರಾಮ ಚಾಮೆತ್ತಡ್ಕ ಇವರನ್ನು ಸನ್ಮಾನಿಸಲಾಯಿತು.
2023-24 ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಾದ ನವೀನ್ ಚಂದ್ರ ರೈ ಏನ್ಮೂರ್ ಗುತ್ತು ,ಅಬ್ದುಲ್ ಖಾದರ್ ,ಮಹಮ್ಮದ್ ನವಾಜ್ ಗುತ್ತಿಗೆ ,ಶಾಲಾ ಬಿಸಿಯೂಟಕ್ಕೆ ತರಕಾರಿ ಒದಗಿಸುವ ಮುಸ್ತಫಾ ನರ್ಲಡ್ಕ ಇವರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ಹಿರಿಯ ವಿದ್ಯಾರ್ಥಿಗಳಾದ ೨೦೨೩-೨೪ ನೇ ವರ್ಷದಲ್ಲಿ ಕಲಿಕಾ ಸಾಧನೆಗಾಗಿ ಲತಿನ್ ಪಟ್ಟೆ, ರೋಶನ್ ಕೆ, ಸಾಹಿತ್ಯಿಕ ಸಾಧನೆಗಾಗಿ ಮಹಮ್ಮದ್ ಮುನಿಸ್, ಕ್ರೀಡಾ ಸಾಧನೆಗಾಗಿ ವಿಜೇತ್ ಮತ್ತು ತೃಷರನ್ನು ಅಭಿನಂದಿಸಲಾಯಿತು.
ಎಡಮAಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಊರಿನ ಹಿರಿಯರಾದ ಪ್ರಭಾಕರ ರೈ ಪಟ್ಟೆ, ರಘುನಾಥ ರೈ ಕಟ್ಟಬೇಡು, ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಲೋಕನಾಥ ರೈ ಪಟ್ಟೆ, ರಮೇಶ್ ಕೋಟೆ ಅಲೆಂಗಾರ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ ಪಟ್ಟೆ, ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಜಯಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸರೋಜಿನಿ, ಹಿರಿಯರಾದ ರಾಮಕೃಷ್ಣ ರೈ ಮಾಲೆಂಗ್ರಿ, ಅಬ್ದುಲ್ ಜೀ ಗುತ್ತಿಗೆ ,ಕುಸುಮಾವತಿ ರೈ ಗುತ್ತು ,ಪ್ರೌಢಶಾಲೆ ಮುಖ್ಯ ಗುರುಗಳಾದ ಟೈಟಾಸ್ ವರ್ಗೀಸ್ ,ಉದ್ಯಮಿಗಳಾದ ರಾಜೇಂದ್ರ ಪ್ರಸಾದ್ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಪ್ರಕಾಶ್ ರೈ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಅಬ್ದುಲ್ ಶರೀಫ್ ಗುತ್ತಿಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಶಾಲೆಗೆ ಕೊಡುಗೆ ನೀಡಿದ ಎಲ್ಲರನ್ನೂ ಸ್ಮರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕೆ. ವರದಿ ವಾಚನ ಮಾಡಿದರು. ಶಾಲೆಯ ಸಹಶಿಕ್ಷಕರಾದ ಶ್ರೀಮತಿ ಶಾಂತಮ್ಮ,ಶ್ರೀಮತಿ ಸುರೇಖಾ, ಕುಮಾರಿ ಗುಲಾಬಿ ,ಶ್ರೀಮತಿ ಸೌಮ್ಯಾಲತ ,ಸುದರ್ಶನ್ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಬಾಲಕೃಷ್ಣ ಹೇಮಳ, ಸುಜಿತ್ ರೈ ಪಟ್ಟೆ, ಪ್ರದೀಪ್ ಎಣ್ಮುರುಗುತ್ತು ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಊರಿನ ವಿಧ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಂತರ ಶಾಲಾ ಶಿಕ್ಷಕ ವೃಂದದವರಿಗೆ ಮತ್ತು ಬೆಳ್ಳಾರೆನ ನೃತ್ಯ ಗುರುಗಳಾದ ಜೀವನ್ ಪಿ. ಎಲ್ ಬೆಳ್ಳಾರೆ ತಂಡದವರಿAದ ತರಬೇತುಗಳಿಂದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಪ್ರಕಾರಗಳು ,ರೂಪಕ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಮತ್ತು ಲಾಸ್ಯ ಮೆಲೋಡೀಸ್ ನ ವಸಂತಿ ಮತ್ತು ತಂಡದವರಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ವರದಿ : ಎ ಎಸ್ ಎಸ್