ಬಿರುಸಿನ ಮತದಾನ, ಜಿದ್ದಾ ಜಿದ್ದಿನ ತ್ರಿಕೋನ ಸ್ಪರ್ಧೆ
ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ವ್ಯಾಪ್ತಿಯಗೊಳಪಟ್ಟ ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಇಂದು ನಡೆಯುತಿದ್ದು, ಒಟ್ಟು 35 ಜನ ಕಣದಲ್ಲಿ ಉಳಿದಿದ್ದಾರೆ.
ಬಿರುಸಿನ ಮತದಾನ, ಜಿದ್ದಾ ಜಿದ್ದಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ, ಅದಲ್ಲದೆ ಕೋರ್ಟ್ ಮುಖಾಂತರ ಹೊಸದಾಗಿ 1002 ಸದಸ್ಯರಿಗೆ ಮುಖಾಂತರ ಮತದಾನ ಹಕ್ಕು ಪಡೆಯಲಾಗಿದ್ದು ಇಂದು ಚುನಾವಣಾ ಎಣಿಕೆ ಕಾರ್ಯ ನಡೆಯುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ವಿನೂಪ್ ಮಲ್ಲಾರ ಮತ್ತು ಪ್ರದೀಪ್ ಕೆ.ಎಲ್ ಬಳಗವಾದ ಸಮಾನ ಮನಸ್ಕ ಸ್ವಾಭಿಮಾನಿ ಬಳಗದವರು ೫೭೯ ಸದಸ್ಯರಿಗೆ ಮತದಾನ ಹಕ್ಕು ತಂದಿದ್ದು, ಹರ್ಷಕುಮಾರ್ ಅವರ
ಸಹಕಾರಿ ಅಭಿವೃದ್ಧಿ ಬಳಗದವರು ಮಣಿಕಂಠ ತಂಡ ೪೨೩ ಸದಸ್ಯರಿಗೆ ಮತದಾನದ ಹಕ್ಕು ತಂದಿರುವುದಾಗಿ ವರದಿಯಾಗಿದೆ.