ಚೆಂಬು ಗ್ರಾಮದ ದಬ್ಬಡ್ಕ ಶ್ರೀ ದುರ್ಗಾದೇವಿ ಸಾನಿಧ್ಯ ಮತ್ತು ಶ್ರೀ ಗುಳಿಗ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವೇ. ಮೂ. ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ಜ.18 ಮತ್ತು 19ರಂದು ನಡೆಯಿತು. ಜ.18ರಂದು ಸಾಯಂಕಾಲ ತಂತ್ರಿಗಳ ಆಗಮನ ದೀಪಪ್ರತಿಷ್ಠೆ, ಊರ – ಪರವೂರ ಭಕ್ತರ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸ್ಥಳಶುದ್ಧಿ, ಪುಣ್ಯಾಹ ಸಪ್ತಶುದ್ಧಿ, ವಾಸ್ತುಹೋಮ, ವಾಸ್ತುಪೂಜೆ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಕಲಶ ಪ್ರತಿಷ್ಠೆ, ಛಾಯಾಚಿತ್ರ ಶುದ್ಧಿ, ಗುಳಿಗ ದೈವದ ಅಧಿವಾಸದಿ , ರಾತ್ರಿ ಅನ್ನಸಂತರ್ಪಣೆ ಜರುಗಿತು.
ಜ.19ರಂದು ಪ್ರಾತ:ಕಾಲ ಪುಣ್ಯಾಹ, ಗಣಪತಿ ಹೋಮ, ಪೂರ್ವಾಹ್ನ ಉತ್ತರಾ ನಕ್ಷತ್ರ ಕುಂಭರಾಶಿಯ ಶುಭಮುಹೂರ್ತದಲ್ಲಿ ಶ್ರೀ ದುರ್ಗಾದೇವಿಯ ಛಾಯಾಚಿತ್ರ ಪ್ರತಿಷ್ಠೆ, ಗುಳಿಗ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಗುಳಿಗ ದೈವದ ತಂಬಿಲ, ಶ್ರೀ ದುರ್ಗಾದೇವಿಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ಜರುಗಿತು.