ಜಾಲ್ಸೂರಿನ ಜೆ.ಕೆ. ಮೈದಾನದಲ್ಲಿ ನಡೆದ ಎರಡು ದಿನಗಳ ಕ್ರಿಕೆಟ್ ಆಟಕ್ಕೆ ತೆರೆ
ಪ್ರಥಮ: ಬ್ರದರ್ಸ್ ಬಾಕಿಲ ದ್ವೀತಿಯ: ರಾಯಲ್ ಬುಲೆಟ್ ದುಗಲಡ್ಕ ದ್ವಿತೀಯ
ಜಾಲ್ಸೂರಿನ ಕಾಸರಗೋಡು ರಸ್ತೆ ಪಕ್ಕದಲ್ಲಿರುವ ಜೆ.ಕೆ. ರಮೇಶ್ ಗೌಡ ಕಾಳಮ್ಮನೆ ಹಾಗೂ ಜೆ.ಕೆ. ಜಯಂತ ಗೌಡ ಕಾಳಮ್ಮನೆ ಅವರ ಮೂಲ ಜಾಗದ ಜೆ.ಕೆ. ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಸಹಜ ಟ್ರೋಫಿ – 2025 ಮುಕ್ತ ಕ್ರಿಕೆಟ್ ಪಂದ್ಯಾಟವು ಜ.19ರಂದು ಸಂಜೆ ಸಮಾರೋಪಗೊಂಡಿತು.
ಜ.18ರಂದು ಬೆಳಿಗ್ಗೆ ಕ್ರಿಕೆಟ್ ಪಂದ್ಯಾಟವನ್ನು ಗದ್ದೆಯ ಮಾಲಕರಾದ ಜೆ.ಕೆ. ಜಯಂತ ಗೌಡರು ದೀಪಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು.
ಸಹಜ ಫ್ಯಾಬ್ ಮಾಲಕ ಜಗದೀಶ್ ಬೇರ್ಪಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಾಲ್ಸೂರಿನ ಹಿರಿಯ ವರ್ತಕರಾದ ಎಂ.ಎಸ್. ಭಟ್ ಬೆನಕ, ಶ್ರೀಮತಿ ಭಾರತಿ ಜಯಂತ ಗೌಡ ಕಾಳಮ್ಮನೆ, ಸತೀಶ ಮರಸಂಕ, ತಾರನಾಥ ಕಲ್ಲಮುರ, ಜಾಲ್ಸೂರಿನ ಆಶಾ ಕಾರ್ಯಕರ್ತೆ ಶ್ರೀಮತಿ ಸರಸ್ವತಿ ಮರಸಂಕ ಉಪಸ್ಥಿತರಿದ್ದರು.
ಮುಕ್ತ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ನಲವತ್ತು ತಂಡಗಳು ಭಾಗವಹಿಸಿದ್ದು, ಜ.18ರಂದು ಒಟ್ಟು ಹದಿನಾರು ಪಂದ್ಯಗಳು ಹಾಗೂ ಜ.19ರಂದು ಫೈನಲ್ ಪಂದ್ಯ ಸೇರಿದಂತೆ 22 ಪಂದ್ಯಾಟಗಳು ನಡೆದವು.
ಬ್ರದರ್ಸ್ ಬಾಕಿಲ ತಂಡ, ರಾಯಲ್ ಬುಲೆಟ್ ದುಗಲಡ್ಕ ತಂಡ, ಓಂ ಅಡ್ಕಾರು ತಂಡ ಹಾಗೂ ಎಂ.ವೈ.ಎಸ್. ಪೈಲಾರು ತಂಡಗಳು ಸೆಮಿ ಫೈನಲ್ ಪ್ರವೇಶಿಸಿದ್ದು, ಅಂತಿಮವಾಗಿ ಬ್ರದರ್ಸ್ ಬಾಕಿಲ ತಂಡ ಹಾಗೂ ರಾಯಲ್ ಬುಲೆಟ್ ತಂಡದ ಮಧ್ಯೆ ಫೈನಲ್ ಪಂದ್ಯಾಟ ಜರುಗಿತು. ಇದರಲ್ಲಿ ಬ್ರದರ್ಸ್ ಬಾಕಿಲ ತಂಡವು ವಿನ್ನರ್ ಆಗಿ ನಗದು ಬಹುಮಾನ ಹಾಗೂ ಶಾಶ್ವತ ಫಲಕ ಪಡೆದುಕೊಂಡರೆ, ರಾಯಲ್ ಬುಲೆಟ್ ದುಗಲಡ್ಕ ತಂಡವು ರನ್ನರಫ್ ಆಗಿ ನಗದು ಬಹುಮಾನ ಮತ್ತು ಶಾಶ್ವತ ಫಲಕ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಸಹಜ ಫ್ಯಾಬ್ ಮಾಲಕರಾದ ಜಗದೀಶ್ ಬೇರ್ಪಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಂಗಾರು ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವಗಳ ತರವಾಡು ಮನೆ ಮುಖ್ಯಸ್ಥರಾದ ಮೋಹನ ನಂಗಾರು, ಸಿ.ಹೆಚ್. ಅಬ್ದುಲ್ ಖಾದರ್ ಕದಿಕಡ್ಕ, ಎಂ.ಎಸ್. ಸದಾನಂದ ಆದಿಶಕ್ತಿ ಪಾರ್ಸೆಲ್ ಸರ್ವೀಸ್, ಗದ್ದೆ ಮಾಲಕರಾದ ಜೆ.ಕೆ. ರಮೇಶ್ ಗೌಡ ಕಾಳಮ್ಮನೆ, ಜೆ.ಕೆ. ಜಯಂತ ಗೌಡ ಕಾಳಮ್ಮನೆ, ಶ್ರೀಮತಿ ಭಾರತಿ ಜಯಂತ ಗೌಡ ಕಾಳಮ್ಮನೆ,, ಶ್ರೀಮತಿ ರೇವತಿ ಕಾಳಮ್ಮನೆ, ಜಾಲ್ಸೂರು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ, ಎಲ್.ಡಿ. ಬ್ಯಾಂಕ್ ನಿವೃತ್ತ ವ್ಯವಸ್ಥಾಪನ ಬಾಲಕೃಷ್ಣ ಗೌಡ ಅರಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಜಗದೀಶ್ ಬೇರ್ಪಡ್ಕ ಅವರ ಮಾಲಕತ್ವದ ಸಹಜ ಫ್ಯಾಬ್ ವತಿಯಿಂದ ಕ್ರಿಕೆಟ್ ಪಂದ್ಯಾಟದ ಟ್ರೋಫಿಯನ್ನು ಆಯೋಜಿಸಿದ್ದು, ಫ್ರೆಂಡ್ಸ್ ಜಾಲ್ಸೂರು ಪಂದ್ಯಾಟವನ್ನು ನಡೆಸಿತು. ಫಲಕ ದಾನಿಗಳಾಗಿ ಮೋಹನ ನಂಗಾರು ಅವರು ಸಹಕರಿಸಿದ್ದರು. ಪ್ರಥಮ ನಗದು ದಾನಿಗಳಾಗಿ ಜಗದೀಶ್ ಬೇರ್ಪಡ್ಕ ಹಾಗೂ ದ್ವಿತೀಯ ನಗದು ದಾನಿಗಳಾಗಿ ಸಿ.ಹೆಚ್. ಅಬ್ದುಲ್ ಖಾದರ್ ಕದಿಕಡ್ಕ ಅವರು ಸಹಕರಿಸಿದರು.