ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜಾಲ್ಸೂರು ಗ್ರಾಮದ ಗ್ರಾಮ ದೇವಸ್ಥಾನವಾಗಿರುವ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಫೆ.18ರಿಂದ 20ರವರೆಗೆ ಜರುಗಲಿದ್ದು, ಆಮಂತ್ರಣ ಪತ್ರಿಕೆಯನ್ನು ಜ‌.21ರಂದು ಮಧ್ಯಾಹ್ನ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀವರ ಪಾಂಗಣ್ಣಾಯ, ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ರೈ ಕುಕ್ಕಂದೂರು, ಪ್ರಧಾನ ಕಾರ್ಯದರ್ಶಿಗಳಾದ ಆತ್ಮಾನಂದ ಗಬ್ಬಲಡ್ಕ, ಗೋಪಾಲ ವಿ. ಪದವು, ಹರೀಶ್ ಕುಕ್ಕುಡೇಲು, ಬಾಲಕೃಷ್ಣ ಮಣಿಯಾಣಿ ಮರಸಂಕ, ಕೋಶಾಧ್ಯಕ್ಷ ವಿಜಯಕುಮಾರ್ ಕೋಡ್ತಿಲು – ವಿನೋಬನಗರ,

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ, ಪ್ರಧಾನ ಕಾರ್ಯದರ್ಶಿಗಳಾದ ಶರತ್ ಅಡ್ಕಾರು, ಜಯರಾಮ ರೈ ಜಾಲ್ಸೂರು, ಶ್ರೀ ಪರಿವಾರ ದೈವಗಳಿಗಳ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮೋಹನ ನಂಗಾರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಅಡ್ಕಾರು, ಕೋಶಾಧ್ಯಕ್ಷ ಮುರಳೀಧರ ಅಡ್ಕಾರು, ಕಛೇರಿ ವ್ಯವಸ್ಥಾಪಕ ಹರ್ಷಿತ್ ಪೇರಾಲು, ಸೇರಿದಂತೆ ಜಾತ್ರೋತ್ಸವ ಸಮಿತಿಯ ಉಪಾಧ್ಯಕ್ಷರುಗಳು, ಉಪಸಮಿತಿಗಳ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳು, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳು, ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.