ಧರ್ಮಶ್ರೀ ನವೋದಯ ಸಂಘ ಚಿದ್ಗಲ್, ದುರ್ಗಾಶ್ರೀ ರೈತ ಸಂಘ ಚಿದ್ಗಲ್ , ಶ್ರೀದುರ್ಗಾ ಮಹಿಳಾ ಮಂಡಲ (ರಿ ) ಕೂತ್ಕುoಜ , ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್ ಇವರ ಜಂಟಿ ಆಶ್ರಯದಲ್ಲಿ “ಸಮಾಜ ರತ್ನ ” ರಾಜ್ಯ ಪ್ರಶಸ್ತಿ ಪಡೆದ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪಂಜ ಶಾರದಾoಬಾ ಭಜನಾ ಮಂಡಳಿಯ ಉಪಾಧ್ಯಕ್ಷರು ಹಾಗೂ ಪಂಜ ಸಹಕಾರಿ ಬ್ಯಾಂಕಿನ ನಿವೃತ್ತ ಉಪ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ ಬಿಳಿಮಲೆಯವರು ಸನ್ಮಾನ ನೆರವೇರಿಸಿದರು.
ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿದ ಪರಮೇಶ್ವರ ಬಿಳಿಮಲೆಯವರು ಮಾತನಾಡಿ, 21 ವರ್ಷವಾದ ಸಂಸ್ಥೆಯನ್ನು ಅಧ್ಯಕ್ಷರಾಗಿ ಮುಂದಾಳತ್ವ ವಹಿಸಿ ಮುನ್ನಡೆಸಿ ಸಂಘದ ಎಲ್ಲ ಸದಸ್ಯರ ಸುಖ ಕಷ್ಟಗಳಲ್ಲಿ ಭಾಗಿಯಾಗಿ ಸಂಘದ ಮುಖಾoತರ ಎಲ್ಲರ ಆರ್ಥಿಕ ಸಮಸ್ಯೆ ಗಳನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಬಡವ ಬಲ್ಲಿದವ ಎಂಬ ಭೇದ ಬಾವವಿಲ್ಲದೆ 21 ವರ್ಷದ ಸಂಸ್ಥೆಯನ್ನು ಉಳಿಸಿ ಬೆಳೆಸಿದ್ದಾರೆ , ನಿರಂತರ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಹಕರಿಸುತಿದ್ದಾರೆ. ಪಂಜ ವನಿತಾ ಮಹಿಳಾ ಮಂಡಲದ ಲ್ಲಿ ಅಧ್ಯಕ್ಷರಾಗಿ , ನೂತನ ಕಟ್ಟಡದ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಚಂದ್ರಾವತಿ ಹೊನ್ನಪ್ಪ ಗೌಡರು ಕೂತ್ಕುಂಜ ಗ್ರಾಮಕ್ಕೆ ಒಂದು ಶಕ್ತಿ. ಗ್ರಾಮದ ಸಂಘ ಸಂಸ್ಥೆ ಗಳಿಗೆ ಅವರು ಬಲು ದೊಡ್ಡ ಆಸ್ತಿ. ಅರ್ಹವಾಗಿಯೇ ಅರಸಿ ಅವರನ್ನು ಜ್ಞಾನ ಮಂದಾರ ಟ್ರಸ್ಟ್ ನ ಪ್ರಶಸ್ತಿ ಬಂದಿದೆ ಎಂದು ಪರಮೇಶ್ವರ ಬಿಳಿಮಲೆ ಯವರು ಹೇಳಿದರು.
ಧರ್ಮಶ್ರೀ ನವೋದಯ ಸಂಘದ ಕಾರ್ಯದರ್ಶಿ ಚಂದ್ರಾವತಿ ಭಾಸ್ಕರ ಹಾಗೂ ಮಹಿಳಾ ಮಂಡಲದ ಅಧ್ಯಕ್ಷೆ ದೇವಕಿ ಧರ್ಮಪಾಲ ರವರು ಉಪಸ್ಥಿತರಿದ್ದರು.
ಚಂದ್ರಾವತಿ ಭಾಸ್ಕರ ಸ್ವಾಗತಿಸಿದರು. ಪದ್ಮಾವತಿ ಚಿನ್ನಪ್ಪ ಪ್ರಾರ್ಥಿಸಿದರು. ವೇದಾವತಿ ಬಾಲಕೃಷ್ಣ ಚಿದ್ಗಲ್ ವಂದನಾರ್ಪಣೆಗೈದರು. ಲತಾ ದಿನೇಶ್ ಚಿದ್ಗಲ್ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ಮಂಡಲದ ಕಾರ್ಯದರ್ಶಿ ರೋಹಿಣಿ ರಮೇಶ್ ವೀಣಾ ಗಿರಿಧರ್ ಇಟ್ಯಡ್ಕ , ಚಂದ್ರಾವತಿ ಪುಟ್ಟಣ್ಣ ಚಿದ್ಗಲ್ , ಹೊನ್ನಪ್ಪ ಗೌಡ ಚಿದ್ಗಲ್ , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು