ಸುಳ್ಯ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ನಿರ್ದೇಶಕರುಗಳಿಗೆ ಆಭಿನಂದನೆ

0

ಸ್ವರ್ಣ ಶ್ರೀ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನಿಯಮಿತ ಸುಳ್ಯ ಇದರ ನಿರ್ದೇಶಕರಾಗಿರುವ ಸಚಿನ್ ಕುಮಾರ್ ಬಳ್ಳಡ್ಕ ಇವರು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಚುನಾಯಿತರಾಗಿ ಈಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ ಮತ್ತು ಇನ್ನೋರ್ವ ನಿರ್ದೇಶಕರಾದ ಧರ್ಮಪಾಲ ಕೊಯಿಂಗಾಜೆ ಇವರು ಸುಳ್ಯ ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್ ಮತ್ತು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ದಿಸಿ ನಿರ್ದೇಶಕರಾಗಿ ಆಯ್ಕೆಯಾಗಿರುವುದರಿಂದ ಇವರಿಗೆ ಜ 22 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಸಹಕಾರಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿ ಅಧ್ಯಕ್ಷರಾದ ಜನಾರ್ಧನ ದೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವತ್ ಬಿಳಿಮಲೆ, ನಿರ್ದೇಶಕರುಗಳಾದ ಆನಂದ ಗೌಡ ಖಂಡಿಗ, ಡಾ. ಪುರುಷೋತ್ತಮ ಕಟ್ಟೆಮನೆ, ಪ್ರಕಾಶ್ ಕೇರ್ಪಳ ಮತ್ತು ದೀಕ್ಷಿತ್ ಪಾನತ್ತಿಲ ಉಪಸ್ಥಿತರಿದ್ದರು.