ಕಳಂಜ ಗ್ರಾಮದ ಪಾಂಡಿಪಾಲು ಎಂಬಲ್ಲಿ ಟಾಟಾ ಎಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಇಂದು ಬೆಳಗ್ಗೆ ಪಲ್ಟಿ ಹೊಡೆದಿದೆ.
ಪೈಪ್ ಲೈನ್ ವರ್ಕ್ ನವರ ವಾಹನ ಇದಾಗಿದ್ದು ತಿರುವು ಬಳಿ ವಾಹನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ವಾಹನದ ಹಿಂಬದಿಯಲ್ಲಿ ಆಯಿಲ್ ಡ್ರಮ್ ಇದ್ದಿದ್ದು ಅದು ರೋಲ್ ಆಗಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಬಳಿಕ ಜೆಸಿಬಿ ಮೂಲಕ ಅದನ್ನೆತ್ತಲಾಗಿದೆ. ಸವಾರರಿಗೆ ಯಾವುದೇ ತೊಂದರೆ ಉಂಟಾಗಿಲ್ಲ.