ಜ.25ರಂದು ಸುಳ್ಯದಲ್ಲಿ ಮಹಿಳಾ ಕ್ರೀಡಾಕೂಟ -2025

0

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ ಇದರ ಆಯೋಜನೆಯಲ್ಲಿ ಮಹಿಳಾ‌ ಕ್ರೀಡಾಕೂಟ -2025 ಜ.25ರಂದು ಸುಳ್ಯದ ಜೆ.ಸಿ. ಗ್ರೌಂಡ್ ಯುವಜನ ಸಂಯುಕ್ತ ಮಂಡಳಿ ಇಲ್ಲಿ ನಡೆಯಲಿದೆ.

ಬೆಳಗ್ಗೆ ಉದ್ಘಾಟನೆಯ ಬಳಿಕ‌ ವಿವಿಧ ಸ್ಪರ್ಧೆಗಳು ನಡೆಯಲಿದೆ.

ಸ್ಪರ್ಧೆಗಳ ವಿವರ : ಹಗ್ಗ ಜಗ್ಗಾ (7ಜನರ ತಂಡ), ರಿಲೇ (4*100) ಪ್ರತೀ ಮಹಿಳಾ ಮಂಡಳಿಯಿಂದ ಒಂದು ಟೀಮ್ ಮಾತ್ರ.

ವಯಸ್ಸು 25-35 ಮಿತಿಯವರಿಗೆ – 100 ಮೀ. ಓಟ, 50 ಮೀ ಲಿಂಬೆ ಚಮಚ ಓಟ, ಗುಂಡು ಎಸೆತ, ವೇಗದ ಸೈಕಲ್ ಓಟ, ನಿಧಾನ ಸ್ಕೂಟಿ ಸವಾರಿ, ಗುರಿ ಆಟ,

ವಯಸ್ಸು 35-45 ವಯೋಮಿತಿ : 100 ಮೀ.ಓಟ, 50 ಮೀ. ಲಿಂಬೆ ಚಮಚ ಓಟ, ಗುಂಡು ಎಸೆತ, ಸ್ಕಿಪಿಂಗ್ (1 ನಿಮಿಷ), ನಿಧಾನ ಸ್ಕೂಟಿ ಸವಾರಿ, ಗುರಿ ಆಟ,

ವಯಸ್ಸು 45-55: 50 ಮೀಟರ್ ಕಾಲ್ನಡಿಗೆ, 50 ಮೀ ಲಿಂಬೆ ಚಮಚ ಓಟ, ಗುಂಡು ಎಸೆತ, ಸ್ಕಿಪ್ಪಿಂಗ್ (1 ನಿಮಿಷ), ನಿಧಾನ ಸ್ಕೂಟಿ ಸವಾರಿ, ಗುರಿ ಆಟ,

ವಯಸ್ಸು 55‌ಮೇಲ್ಪಟ್ಟು – 50 ಮೀ. ಕಾಲ್ನಡಿಗೆ, 50 ಮೀ ನಿಂಬೆ ಚಮಚ ಓಟ, ಗುಂಡು ಎಸೆತ, ಸ್ಕಿಪ್ಪಿಂಗ್, ನಿಧಾನ ಸ್ಕೂಟಿ ಸವಾರಿ, ಗುರಿ ಆಟ ಗಳನ್ನು ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.