ಅಜ್ಜಾವರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾಗಿ ಅಬ್ದುಲ್ಲ ಅಜ್ಜಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿದ್ದ ಜಯರಾಮ ಅತ್ಯಡ್ಕರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅಬ್ದುಲ್ಲರನ್ನು ಆಯ್ಕೆ ಮಾಡಲಾಯಿತು.
ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆ ನಡೆದ ಸಂದರ್ಭ ಅಜ್ಜಾವರ ದಲ್ಲಿ ಕಾಂಗ್ರೆಸ್ ಬೆಂಬಲಿತರು ಬಹುಮತ ಪಡೆದಿದ್ದರು. ಎರಡನೇ ಅವಧಿಯ ಉಪಾಧ್ಯಕ್ಷತೆಯ ಆಯ್ಕೆ ಸಂದರ್ಭ ಮಾತುಕತೆ ನಡೆದು ಎರಡೂವರೆ ವರ್ಷದ ಅವಧಿಯಲ್ಲಿ ಜಯರಾಮ ಅತ್ಯಡ್ಕ ಹಾಗೂ ಅಬ್ದುಲ್ಲ ಅಜ್ಜಾವರ ಮಧ್ಯೆ ಅಧಿಕಾರ ಹಂಚಿಕೆಗೆ ಒಪ್ಪಂದ ಆಗಿತ್ತು. ಅದರಂತೆ ಉಪಾಧ್ಯಕ್ಷ ರಾದ ಜಯರಾಮರು ತಮ್ಮ ಅವಧಿ ಮುಕ್ತಾಯ ವಾಗುತ್ತಿದ್ದಂತೆ ಉಪಾಧ್ಯಕ್ಷ ತೆಗೆ ರಾಜೀನಾಮೆ ನೀಡಿದ್ದರು. ಇದೀಗ ಆ ತೆರವಾದ ಸ್ಥಾನಕ್ಕೆ ಅಬ್ದುಲ್ಲ ಅಜ್ಜಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಹಶೀಲ್ದಾರ್ ಮಂಜುಳಾ ಹಾಗೂ ಉಪ ತಹಶೀಲ್ದಾರ್ ಚಂದ್ರಕಾಂತ್ ರವರು ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು.
ಈ ಸಂದರ್ಭ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಅಧ್ಯಕ್ಷೆ ದೇವಕಿ ಕಾಟಿಪಳ್ಳ, ಮಾಜಿ ಉಪಾಧ್ಯಕ್ಷ ರುಗಳಾದ ಜಯರಾಮ ಅತ್ಯಡ್ಕ, ಲೀಲಾ ಮನಮೋಹನ್ ಹಾಗೂ ಪಂಚಾಯತ್ ಸದಸ್ಯರು, ಮೊದಲಾದವರಿದ್ದರು.