ಸುಳ್ಯ ಪೊಲೀಸ್ ಠಾಣೆಯಲ್ಲಿ ಗ್ರೀನ್ ವ್ಯೂ ಶಾಲಾ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ ಜ 23 ರಂದು ನಡೆಯಿತು. ಪಿಎಸ್ಐ ಗಳಾದ ಸಂತೋಷ್ ಬಿ ಪಿ ಮತ್ತು ಸರಸ್ವತಿ ರವರು ವಿದ್ಯಾರ್ಥಿಗಳನ್ನು ಹಾಗೂ ಶಾಲಾ ಶಿಕ್ಷಕ ವೃಂದದವರನ್ನು ಠಾಣೆಗೆ ಬರಮಾಡಿಕೊಂಡರು. ಬಳಿಕ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸರ ಕರ್ತವ್ಯ ನಿರ್ವಹಣಾ ವಿಧಾನ, ಕಾನೂನು ಸುವ್ಯವಸ್ಥೆ ವಿಭಾಗ,ತನಿಖಾಧಿಕಾರಿಗಳ ವಿಭಾಗ,ಕಂಪ್ಯೂಟರ್, ಠಾಣಾ ಬರಹಗಾರರ ವಿಭಾಗ ಹಾಗೂ ದಿನಚರಿ, ಅರ್ಜಿಗಳ ಬಗ್ಗೆಯೂ ಮನವರಿಕೆ ಮಾಡಲಾಯಿತು.
ಮಕ್ಕಳ ಸುರಕ್ಷತೆ,ರಸ್ತೆ ಸಂಚಾರ ನಿಯಮ,ವಾಹನ ಅಪರಾಧ,ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವ ಕಾನೂನು ಬಗ್ಗೆಯೂ ಹಾಗೂ ಮಕ್ಕಳ ಹಕ್ಕುಗಳ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಪಿ ಎಸ್ ಐ ಗಳಾದ ಸಂತೋಷ್ ಹಾಗೂ ಸರಸ್ವತಿ ರವರು ಅರಿವು ಮೂಡಿಸಿದರು.
ವಿದ್ಯಾರ್ಥಿಗಳು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳುವ ಮೂಲಕ ಪಾಲ್ಗೊಂಡಿದ್ದರು.
ಪೊಲೀಸ್ ಠಾಣೆಗಳು ಮಕ್ಕಳಿಗೆ ತೆರೆದ ಮನೆಯಂತಾಗಲಿ ಬಾಂಧವ್ಯ ವೃದ್ಧಿ ಹಾಗೂ ಶಾಲಾ ಹಂತದಲ್ಲಿ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎನ್ನುವುದು ಕಾರ್ಯಕ್ರಮ ಮೂಲ ಉದ್ದೇಶವಾಗಿತ್ತು.
ಈ ಸಂಧರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಉಮರ್ ಕೆ ಎಸ್,ಶಾಲಾ ಮುಖ್ಯೋಪಾಧ್ಯಾಯ ಇಲ್ಯಾಸ್ ಕಾಶಿಪಟ್ಣ ಹಾಗೂ ಶಾಲಾ ಹಿರಿಯ ಶಿಕ್ಷಕಿ ಜಯಂತಿ,ಅಶ್ವಿನಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ
ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಿದರು.