ಡಿ.ಕೆ. ಗ್ರೂಪ್ ಆಫ್ ಕಂಪನಿಸ್ ವತಿಯಿಂದ ಉದ್ಯಮಿ ಶ್ರೀ ಕೃಷ್ಣ ಸೋಮಯಾಗಿಯವರಿಗೆ ಗೌರವ

0

ಸುಳ್ಯದ ಶ್ರೀ ಹರಿ ಬಿಲ್ಡಿಂಗ್ ನಲ್ಲಿ
ಕಾರ್ಯನಿರ್ವಹಿಸುತ್ತಿರುವ
ಡಿ.ಕೆ. ಗ್ರೂಪ್ ಆಫ್ ಕಂಪನಿಗೆ 1 ಲಕ್ಷ ನಿಖರ ಠೇವಣಿ ನೀಡಿ ಸಹಕರಿಸಿದ ಉದ್ಯಮಿ ಶ್ರೀ ಕೃಷ್ಣ ಎಂ ಎನ್. ಸೋಮಯಾಗಿಯವರಿಗೆ ಜ.24 ರಂದು ಗೌರವಿಸಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರು ಹಾಗೂ ಶಾಖಾ ಅಧ್ಯಕ್ಷರಾದ ವೆಂಕಟ್ರಮಣ
ಮುಳ್ಯ ಶಾಲು ಹೊದಿಸಿ, ಸನ್ಮಾನಿಸಿ ಇನ್ನು ಮುಂದೆ ಕೂಡ ಸಂಸ್ಥೆಯ ಅಭಿವೃದ್ದಿಗೆ ನಿಮ್ಮ ಸಹಕಾರವನು ಬಯಸುತ್ತೇವೆ ಎಂದು ಇವರಿಗೆ ಸಂಸ್ಥೆಯ ಸ್ಥಾಪಕರಾದ ಆಲ್ವಿನ್ ಜೋಯಲ್ ನೊರೊನ್ಹ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಗಳ ಪರವಾಗಿ ಅಭಿನಂದಿಸಿ ಶುಭಹಾರೈಸಿದರು.

ಶ್ರೀ ಕೃಷ್ಣ ಸೋಮಯಾಗಿಯವರು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.

ಸಹಾಯಕ ಶಾಖಾ ವ್ಯವಸ್ಥಾಪಕರಾದ ಪವನ್ ಕುಮಾರ್ ರವರು ಸ್ವಾಗತಿಸಿದರು.

ಈ ಸಂದರ್ಭ ಶಾಖಾ ವ್ಯವಸ್ಥಾಪಕ ಅವಿನಾಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.