








ಸುಳ್ಯ ಮೂಲದ ಉದ್ಯಮಿಗಳಾದ ಅಶ್ರಫ್ ಅಡ್ಕಾರ್ ಮತ್ತು ಇಬ್ರಾಹಿಂ ಕದಿಕಡ್ಕ ಬಿಗ್ 4 ಟೈಲ್ಸ್ ಸಂಸ್ಥೆಯವರ ಮಾಲಕತ್ವದಲ್ಲಿ ಸೌದಿ ಅರೇಬಿಯದ ಅಲ್ ಕೋಬರ್ ನಲ್ಲಿ ಜ 23 ರಂದು ಪಾಲ್ಮ್ ಟ್ರೀ ರೆಸ್ಟೋರೆಂಟ್ ಶುಭಾರಂಭಗೊಂಡಿದೆ.

ನೂತನ ಸಂಸ್ಥೆಯು ಅಲ್ ಕೋಬರ್ ನ ಜನುಬಿಯನ್ ಪ್ರದೇಶದ ಫಾರ್ಮ್ ಸೂಪರ್ ಮಾರ್ಕೆಟ್ ಬಳಿ ಕಾರ್ಯಚರಿಸುತ್ತಿದ್ದು ಈ ಸಂಸ್ಥೆಯು ಅಲ್ ಕೋಬರ್ ಪರಿಸರದಲ್ಲಿ ಭಾರತೀಯ ಖಾದ್ಯಗಳ ಅತೀ ದೊಡ್ಡ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಧುನಿಕ ಶೈಲಿಯ ಮಲ್ಟಿ ಕುಶನ್ ವ್ಯವಸ್ಥೆಗಳು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಗಳಿಂದ ಕೂಡಿದ್ದು, ಇಲ್ಲಿ ಇಂಡಿಯನ್, ಚೈನೀಸ್ ಅರೇಬಿಯನ್ ಖಾದ್ಯಗಳು ಲಭ್ಯವಿದ್ದು ಸೌದಿ ಅರೇಬಿಯಾದ ಜನತೆ ಹಾಗೂ ಅನಿವಾಸಿ ಭಾರತೀಯರ ಮನಸ್ಸಿಗೆ ಇಷ್ಟಪಡುವ ಖಾದ್ಯಗಳು ಲಭ್ಯವಿರುತ್ತದೆ ಎಂದು ಮಾಲಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.









