ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನ ವಿಮಾ ಸಲಹೆಗಾರ ಸುಜಿತ್ ರೈ ಪಟ್ಟೆಯವರಿಗೆ ಸ್ಟಾರ್ ಅವಾರ್ಡ್

0

ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ವಿಮಾ ಸಲಹೆಗಾರರ 2024 ನೇ ಸಾಲಿನ ವಾರ್ಷಿಕ ವರ್ಷದ ಸ್ಟಾರ್ ಅವಾರ್ಡ್” ಕಾರ್ಯಕ್ರಮ ಜನವರಿ 28 ರಂದು ಮಂಗಳೂರಿನ ಮೋತಿ ಮಹಲ್‌ನ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಂಗಳೂರಿನ ಕೆ.ಎಸ್.ರಾವ್. ಬ್ರಾಂಚ್ ನ ವಿಮಾ ಪ್ರತಿನಿಧಿಯಾದ ಸುಜಿತ್ ರೈ ಪಟ್ಟೆಯವರಿಗೆ ಹೆಚ್ಚಿನ ಪ್ರೀಮಿಯಂ ಸಂಗ್ರಹದ ಬಗ್ಗೆ ಯುನೈಟೆಡ್ ಇಂಡಿಯಾದ ಬೆಂಗಳೂರು ಪ್ರಾಂತ್ಯದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ. ರಾಜೇಶ್ವರೀಯವರು ಸ್ಟಾರ್ ಅವಾರ್ಡ್” ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಂಪೆನಿಯ ರೀಜಿನಲ್ ಮ್ಯಾನೇಜರ್ ಕೆ.ಎಸ್. ಬಾಲಕೃಷ್ಣನ್ ಮಂಗಳೂರು ಪ್ರಾಂತ್ಯದ ಪ್ರಭಾರ ಡಿವಿಜನಲ್ ಮ್ಯಾನೇಜರ್ ವೀರ್ ಅಭಿಮನ್ಯು ಸೂದ್, ಬ್ರಾಂಚ್ ಮ್ಯಾನೇಜರ್ ವಿಜೇತಾ ಅಭಿಮನ್ಯು ಮತ್ತು ಆದಿತ್ಯ ಶೆಟ್ಟಿ B.D.E ಉಪಸ್ಥಿತರಿದ್ದರು. ಸುಜಿತ್ ರೈ ಪಟ್ಟಿಯವರು ಕಳೆದ 10 ವರ್ಷಗಳಿಂದ ಸತತವಾಗಿ ಗೌರವಕ್ಕೆ ಪಾತ್ರರಾಗಿದ್ದು, ಬೆಳ್ಳಾರೆ ಮೇಲಿನ ಪೇಟೆಯಲ್ಲಿ ‘ಅಸ್ಮಿ ವಾಯುಮಾಲಿನ್ಯ ತಪಸಣಾ ಕೇಂದ್ರ ಮತ್ತು ವಾಹನಗಳ ಇನ್ಸೂರೆನ್ಸ್ ಪಾಯಿಂಟ್ ಸಂಸ್ಥೆಯನ್ನು ನಡೆಸುತ್ತಿದ್ದು ವಿಮಾ ಸಲಹೆಗಾರನಾಗಿ ಗ್ರಾಹಕರಿಗೆ ವಾಹನಗಳ ಪಾಲಿಸಿಗಳ ಬಗ್ಗೆ ಉತ್ತಮ ನಿಖರ ಮಾಹಿತಿ ಮತ್ತು ಇನ್ಸೂರೆನ್ಸ್ ಕ್ರೈಮ್ ನ ಸಂದರ್ಭದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ.