ಮಂಡೆಕೋಲು ಕಳೇರಿ ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ

0

ಮಂಡೆಕೋಲು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ – ಶ್ರೀ ಉಳ್ಳಾಕುಲು ಮತ್ತು ಧರ್ಮದೈವಗಳ ಹಾಗೂ ಸಪರಿವಾರ ದೈವಗಳ ದೈವಸ್ಥಾನ ಕಳೇರಿ – ಶ್ರೀ ಉಳ್ಳಾಕುಲು, ಧರ್ಮ ದೈವ ಹಾಗೂ ಸಹಪರಿವಾರ ದೈವಗಳ ಒಂಬತ್ತನೇ ವರ್ಷದ ಪ್ರತಿಷ್ಠಾ ಮಹೋತ್ಸವ ಜ.31ರಂದು ನಡೆಯಿತು.

ಜ.30ರಂದು ಸಂಜೆ ದೇವತಾ ಪ್ರಾರ್ಥನೆಯೊಂದಿಗೆ, ಉಗ್ರಾಣ ತುಂಬಿಸಲಾಯಿತು. ಬಳಿಕ‌ಭಜನಾ ಕಾರ್ಯಕ್ರಮ, ರಾತ್ರಿ ಪ್ರಸಾದ ವಿತರಣೆ ನಡೆಯಿತು.

ಜ.31ರಂದು ಗಣಪತಿ ಹವನ, ನವಕ ಕಲಶಾಭಿಷೇಕ, ಸಾರ್ವಜನಿಕರಿಂದ ಭಜನಾ ಕಾರ್ಯಕ್ರಮ, ದೈವಗಳಿಗೆ ತಂಬಿಲ, ಮಧ್ಯಾಹ್ನ ‌ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕಳೇರಿ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ಸೇರಿದಂತೆ ನೂರಾರು ಮಂದಿ ಆಗಮಿಸಿ ತಂಬಿಲ ಪ್ರಸಾದ ಸ್ವೀಕರಿಸಿದರು.