ಕಡಬ ತಾ. ಪಂ. ನ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ನಿವೃತ್ತಿ

0

ಕಡಬ ತಾಲ್ಲೂಕು ಪಂಚಾಯತ ನ ಸಹಾಯಕ ನಿರ್ದೇಶಕ, ಸಹಾಯಕ ಲೆಕ್ಜಾಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಜ. 31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ನಾಲ್ಕನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಕಡಬದ ಪಿಜಕ್ಕಳದಲ್ಲಿ ಪಡೆದ ಇವರು 7 ನೇ ತರಗತಿ ವರೆಗೆ ಕೋಟೆಮುಂಡುಗಾರು ಹಿ.ಪ್ರಾ ಶಾಲೆಯಲ್ಲಿ ಶಿಕ್ಷಣ ಪಡೆದರು. ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. 1987 ರಲ್ಲಿ ಕಳಂಜ ಗ್ರಾ.ಪಂ ಗೆ ಬಿಲ್ ಕಲೆಕ್ಟರಾಗಿ ಸೇವೆ ಆರಂಭಿಸಿದ ಇವರು 1998 ರಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿ ಎಡಮಂಗಲ ಗ್ರಾ.ಪಂ ಗೆ ಭಡ್ತಿಗೊಂಡರು. ಬಳಿಕ ಕಲ್ಮಡ್ಕ ಹಾಗೂ ಬಾಳಿಲ ಗ್ರಾ.ಪಂ ಗೆ ಪ್ರಭಾರ ಕಾರ್ಯದರ್ಶಿ ಯಾಗಿಯೂ ಕೆಲಸ ನಿರ್ವಹಿಸಿದರು. 2010 ರಲ್ಲಿ ಗ್ರೇಡ್‌ ಒನ್ ಕಾರ್ಯದರ್ಶಿಯಾಗಿ ಮುಭಂಡ್ತಿಗೊಂಡು ಕಡಬ ಗ್ರಾ.ಪಂ ಗೆ ವರ್ಗಾವಣೆ ಗೊಂಡರು. 2013 ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಭಡ್ತಿಗೊಂಡು ಐತ್ತೂರು ಗ್ರಾ.ಪಂ ಗೆ ವರ್ಗಾವಣೆಗೊಂಡು. ಬಳಿಕ ಎರಡು ವರ್ಷಗಳ ಕಾಲ ಬೆಳ್ಳಾರೆಯಲ್ಲಿ ಕರ್ತವ್ಯ ನಿರ್ವಹಿಸಿ 2016 ರಲ್ಲಿ ಕಡಬ ಗ್ರಾ.ಪಂ ಗೆ ವರ್ಗಾವಣೆಗೊಂಡರು. 2020 ರಿಂದ ಕಡಬ ತಾ.ಪಂ ನಲ್ಲಿ ಉದ್ಯೋಗ ಖಾತರಿಯ ಸಹಾಯಕ ನಿರ್ದೇಶಕ, ಸಹಾಯಕ ಲೆಕ್ಜಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಧೀರ್ಘ 37 ವರ್ಷಗಳ ಸೇವೆ ಸಲ್ಲಿಸಿದ್ದಾರೆ.


ಇವರ ಪತ್ನಿ ಶ್ರೀಮತಿ ಮೋಹಿನಿ ಕೋಟೆಮುಂಡುಗಾರು ಹಿ.ಪ್ತಾ.ಶಾಲೆಯ ಮುಖ್ಯೋಪಾಧ್ಯಾಯಿನಿ. ಪುತ್ರಿ ದೀಕ್ಷಾ ಸಿ‌.ಕೆ ಬಿ.ಎಡ್ ಪದವೀದರೆ ಖಾಸಗಿ ಕಂಪೆನಿಯೊಂದರ ಉದ್ಯೋಗಿ.‌ ದೀವಿಶ್ ಸಿ ಕೆ ಮಂಗಳೂರಿನ ತ್ರಿಷಾ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಬಿ.ಕಾಂ ಪದವಿ ಓದುತಿದ್ದಾರೆ.